ಬೆಂಗಳೂರು: ಬಳ್ಳಾರಿಯಲ್ಲಿ ಗಣಿ ಉದ್ಯಮ ತನ್ನ ಜೋರು ಭರಾಟೆಯಿಂದ ಎಲ್ಲೆಡೆ ಹೆಸರಾಗಿದೆಯಾದರೂ, ಇಲ್ಲಿನ ಜೀನ್ಸ್ ಉದ್ಯಮವು ಎಲೆ ಮರೆ ಕಾಯಿಯಂತೆ ಇದ್ದು ಅಷ್ಟು ಪ್ರಖ್ಯಾತಿಯನ್ನು ಪಡೆದಿರಲಿಲ್ಲ. ಆದರೇ ವಾಸ್ತವ ಸಂಗತಿಯೆAದರೇ ಬಳ್ಳಾರಿ ಜೀನ್ಸ್ ಉದ್ಯಮವು ಹಲವು ದಶಕಗಳಿಂದ ದೇಶ ಹಾಗೂ ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ.
ಈಗ ಪ್ರಸ್ತುತ ರಾಜ್ಯ ಸರ್ಕಾರವು ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಉತ್ತೇಜನ ನೀಡುವ, ತನ್ಮೂಲಕ ರಫ್ತು ವಲಯದಲ್ಲಿ ಬಳ್ಳಾರಿ ಜೀನ್ಸಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿದೆ.
ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯಂತೆ ಬಳ್ಳಾರಿಯಲ್ಲಿ ‘ಜೀನ್ಸ್ ಪಾರ್ಕ್’ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಇತ್ತೀಚೆಗೆ ತಿಳಿಸಿದ್ದಾರೆ. ಜೀನ್ಸ್ ಪಾರ್ಕ್ ಸ್ಥಾಪನೆಗಾಗಿ ಬಳ್ಳಾರಿಯ ಸಂಜೀವರಾಯನಕೋಟೆಯಲ್ಲಿ 154 ಎಕರೆ ಸ್ವಾಧೀನಪಡಿಸಿಕೊಂಡಿದ್ದು, ಅಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜೀನ್ಸ್ ಉಡುಪು ತಯಾರಿಕಾ ಕಂಪನಿಗಳು ಆರಂಭವಾಗುವAತೆ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿನ ಜೀನ್ಸ್ ಉಡುಪು ತಯಾರಿಕೆ ಉದ್ಯಮ ನೆಲ ಕಚ್ಚಿದ್ದು, ಹೂಡಿಕೆದಾರರು ಮತ್ತು ರಫ್ತುದಾರರ ಗಮನ ಸೆಳೆಯಲು ಈ ಜೀನ್ಸ್ ಪಾರ್ಕ್ ಸಹಕಾರಿಯಾಗಬಹುದು. ಪಾರ್ಕ್ನಲ್ಲಿ ಸ್ಥಾಪಿಸಲ್ಪಡುವ ಘಟಕಗಳಿಗೆ ಉತ್ತೇಜನ ನೀಡುವ ಸಲುವಾಗಿ, ರಿಯಾಯಿತಿ ಸೌಲಭ್ಯವನ್ನೂ ಕೊಡಿಸುವ ನಿಟ್ಟಿನಲ್ಲಿ ಕೇಂದ್ರ ಜವಳಿ ಸಚಿವರ ಜತೆ ಸಭೆ ನಡೆಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಇತ್ತೀಚೆಗಿನ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳಿಂದ ಅಲ್ಲಿನ ವಿದೇಶಿ ಹೂಡಿಕೆದಾರರ ಗಮನ ಬಳ್ಳಾರಿಯ ಜೀನ್ಸ್ ತಯಾರಿಕೆ ಉದ್ಯಮದ ಮೇಲೆ ಹರಿದಿದೆ, ಈ ಸದವಕಾಶ ಪರಿವರ್ತಿಸಿಕೊಂಡು ಹೂಡಿಕೆ ಆಕರ್ಷಿಸಲು ಇದು ನಿಜವಾಗಲೂ ಸರಿಯಾದ ಸಮಯ. ರಾಜ್ಯ ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ತ್ವರಿತವಾಗಿ ಜೀನ್ಸ್ ಪಾರ್ಕ್ ಸಾಕಾರಗೊಳ್ಳುವಂತೆ ನೋಡಿಕೊಳ್ಳಬೇಕು.
ಬಳ್ಳಾರಿಯಲ್ಲಿ ಪ್ರಸ್ತುತ 500ಕ್ಕೂ ಹೆಚ್ಚು ಜೀನ್ಸ್ ಉಡುಪು ತಯಾರಿಕಾ ಘಟಕಗಳಿವೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿಸಿವೆ, ಇದಕ್ಕೆ ವ್ಯವಸ್ಥಿತ ರೂಪ ನೀಡಿ, ರಫ್ತು ಕೇಂದ್ರಿತವಾಗಿಯೂ ಬೆಳೆಸುವುದು ಈ ಜೀನ್ಸ್ ಪಾರ್ಕ್ನ ಪರಿಕಲ್ಪನೆಯ ಉದ್ಧೇಶವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಘೋಷಣೆ ಮಾಡಿದ್ದು, ಅಸಂಘಟಿತ ಜೀನ್ಸ್ ಉದ್ಯಮಕ್ಕೆ ಸಂಘಟಿತ ರೂಪ ನೀಡಿ, ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವುದು ಇದರ ಉದ್ದೇಶ. ಬಳ್ಳಾರಿ ಜೀನ್ಸ್ ಪಾರ್ಕ್ ಸ್ಥಾಪನೆಯಿಂದ ಪ್ರಾದೇಶಿಕ ಆರ್ಥಿಕತೆಗೆ ಚೈತನ್ಯ ಬರಲಿದೆ, ಅಲ್ಲದೆ, ನಾವೀನ್ಯತೆ, ಉಡುಪು ಕ್ಷೇತ್ರಕ್ಕೆ ಸಂಬAಧಿಸಿದ ಸಂಶೋಧನೆಗಳಿಗೆ ಆದ್ಯತೆ ಸಿಗಲಿದೆ.
ಜೀನ್ಸ್ ಉಡುಪು ಯುವಜನಾಂಗಕ್ಕೆ ಅಚ್ಚುಮೆಚ್ಚಿನದಾಗಿದ್ದು, ರಾಜ್ಯದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯಡಿ ಬಳ್ಳಾರಿ ಸುತ್ತಮುತ್ತಲಿನ ಜೀನ್ಸ್ ಉಡುಪು ತಯಾರಿಕಾ ಘಟಕಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ಜೀನ್ಸ್ ಮಾರುಕಟ್ಟೆ ಗುರಿಯಾಗಿಟ್ಟುಕೊಂಡು ಈ ಜೀನ್ಸ್ ಪಾರ್ಕ್ ಬಳ್ಳಾರಿಯಲ್ಲಿ ಸಾಪಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮುಕ್ತ ಆರ್ಥಿಕ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಂಡು, ಯೋಜನೆಗಳನ್ನು ಅನುಷ್ಠಾನಗೊಳಿಸುವ ದೇಶ ಅಥವಾ ರಾಜ್ಯಗಳಿಗೆ ಅಡ್ವಾಂಟೆಜ್ ಇರುತ್ತದೆ. ಸ್ಪರ್ಧಾತ್ಮಕ ಆರ್ಥಿಕ ಜಗತ್ತಿನಲ್ಲಿ ಮೊದಲು ಹೆಜ್ಜೆ ಇಟ್ಟವರದ್ದೇ ಪಾರುಪತ್ಯ. ಹೀಗಾಗಿ ನಮ್ಮ ನೆರೆ ರಾಷ್ಟçದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯಿಂದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಶುಕ್ರದೆಸೆ ಬಂದಾAತಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವುದು ಬಳ್ಳಾರಿಯಲ್ಲಿ ಕೈಗಾರಿಕೋದ್ಯಮದ ಬೆಳವಣಿಗೆಗೆ ಪೂರಕ ನಡೆ ಎನ್ನಬಹುದು.