ನವದೆಹಲಿ: ಒಡಿಶಾದ ಗಂಜಾಂ ಜಿಲ್ಲೆಯ ಸಂಸ್ಕøತ ವಿದ್ವಾಂಸರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ಕಾರ್ಯಗಳ ಕುರಿತು ಸಂಸ್ಕೃತದಲ್ಲಿ ‘ನರೇಂದ್ರ ಆರೋಹಣಂ’ ಎಂಬ ಮಹಾಕಾವ್ಯ ಬರೆದಿದ್ದಾರೆ. ನರೇಂದ್ರ ಆರೋಹಣಂ ಎಂಬ ಶೀರ್ಷಿಕೆಯ 700 ಪುಟಗಳ ಪುಸ್ತಕವನ್ನು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸೋಮನಾಥ್ ದಾಶ್ ಅವರು ಬರೆದಿದ್ದಾರೆ. ಕಳೆದ ವಾರ ಗುಜರಾತ್‍ನ ವೆರಾವಲ್‍ನಲ್ಲಿ ನಡೆದ ಯುವಜನೋತ್ಸವದಲ್ಲಿ ಇದನ್ನು ಅನಾವರಣಗೊಳಿಸಲಾಯಿತು.
ಪಿಟಿಐ ವರದಿಯ ಪ್ರಕಾರ, ಪುಸ್ತಕವು 12 ಅಧ್ಯಾಯಗಳಲ್ಲಿ 1,200 ಪದ್ಯಗಳನ್ನು (ಶ್ಲೋಕಗಳು) ಒಳಗೊಂಡಿದೆ, ಇಂಗ್ಲಿμï ಮತ್ತು ಹಿಂದಿ ವಿವರಣೆಗಳನ್ನು ಒಳಗೊಂಡಿದೆ. ಇದು ಮೋದಿಯವರ ಜೀವನವನ್ನು, ಗುಜರಾತ್‍ನಲ್ಲಿ ಅವರ ವಿನಮ್ರ ಆರಂಭದಿಂದ ಗುಜರಾತ್‍ನ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಸ್ತುತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿರುವ ಪ್ರಯಾಣದವರೆಗೆ ದಾಖಲಿಸಿದೆ.
“ಸಾಧಾರಣ ಕೌಟುಂಬಿಕ ಹಿನ್ನೆಲೆಯಿಂದ ಬಂದು ಅವರು ಬೆಳೆದ ಬೆಳವಣಿಗೆಯಿಂದ ಪ್ರೇರಿತರಾಗಿದ್ದೇನೆ. ಮೋದಿಯವರ ಹೋರಾಟಗಳು ಮತ್ತು ತಪಸ್ವಿ ರಾಜಕೀಯ ಪ್ರಯಾಣವು ಅವರನ್ನು ವಿಶ್ವಾದ್ಯಂತ ಯುವಕರಿಗೆ ಸ್ಫೂರ್ತಿ ನೀಡಿದೆ. ಅಂತಹ ವ್ಯಕ್ತಿತ್ವದ ಬಗ್ಗೆ ಸಂಸ್ಕೃತದಲ್ಲಿ ಮಹಾ ಕಾವ್ಯ ಬರೆಯಲು ನಾನು ಪ್ರೇರೆಪಣೆಗೊಂಡು ಈ ಗ್ರಂಥವನ್ನು ಬರೆದಿದ್ದಾನೆ ಎಂದು 48 ವರ್ಷದ ಸಹ ಪ್ರಾಧ್ಯಾಪಕರು ಹೇಳಿದರು.
ಈ ಕಾರ್ಯವನ್ನು ಪೂರ್ಣಗೊಳಿಸಲು ನಾಲ್ಕು ವರ್ಷಗಳನ್ನು ತೆಗೆದುಕೊಂಡಿದ್ದೇನೆ ಎಂದು ಸೋಮನಾಥ್ ದಾಶ್ ಹೇಳಿದರು. ಈ ಸಮಯದಲ್ಲಿ, ಅವರು ಪುಸ್ತಕಗಳು, ಜರ್ನಲ್‍ಗಳು, ಮೋದಿಯವರ ಭಾಷಣಗಳು ಮತ್ತು ಅವರ ರೇಡಿಯೋ ಟಾಕ್ ಸರಣಿ ಮನ್ ಕಿ ಬಾತ್ ಸೇರಿದಂತೆ ವಿವಿಧ ಮೂಲಗಳನ್ನು ಪರಿಶೀಲಿಸಿ ಈ ಗ್ರಂಥದ ರಚನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಸೋಮನಾಥ್ ದಾಶ್ ಅವರು ಮೋದಿಯನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲವಾದರೂ, ವಿವಿಧ ಮೂಲಗಳಿಂದ ಪ್ರಧಾನಿಯವರ ಜೀವನ ಮತ್ತು ಸಾಧನೆಗಳ ಸಮಗ್ರ ಚಿತ್ರಣವನ್ನು ಸಂಗ್ರಹಿಸಿ ಈ ‘ನರೇಂದ್ರ ಆರೋಹಣಂ’ ಎಂಬ ಮಹಾಕಾವ್ಯ ಬರೆದಿದ್ದಾರೆ.