ಸಿರುಗುಪ್ಪದಲ್ಲಿ ಸ್ಲಂ ಬೋರ್ಡ್ ವತಿಯಿಂದ ಮಂಜೂರಾದ ೫೯೮ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

ಬಳ್ಳಾರಿ: ಸ್ಲಂ ಬೋರ್ಡ್ ವತಿಯಿಂದ ಮಂಜೂರಾದ ೫೯೮ ಮನೆಗಳ ನಿರ್ಮಾಣಕ್ಕೆ ಸಿರುಗುಪ್ಪದ ಎಲ್ಲಮ್ಮ ದೇವಿ ಶಾಲೆ ಹತ್ತಿರ ಭೂಮಿಪೂಜೆಯನ್ನು ಸಾರಿಗೆ, ಪರಿಶಿ? ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗುರುವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಅನ್ನ, ನೀರು, ಸೂರು ತುಂಬಾ ಮುಖ
ಈ ನಿಟ್ಟಿನಲ್ಲಿ ಅತ್ಯಂತ ನಿ?ಯಿಂದ, ಬಡವರ ಪರ ಕಾಳಜಿ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.


ಶ್ರಮಿಕರಿಗೆ ಅನ್ನ, ನೀರು, ಸೂರು ಒದಗಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಿದ್ದು, ಗುಡಿಸಲು ಮುಕ್ತ ನಗರ ಹಾಗೂ ಗುಡಿಸಲು ಮುಕ್ತ ಗ್ರಾಮಗಳ ಗುರಿ ಹೊಂದಲಾಗಿದೆ. ಇದೀಗ ಸರಕಾರದಿಂದ, ಗ್ರಾಮೀಣ ಭಾಗದಲ್ಲಿ ೪ ಲಕ್ಷ ಮನೆಗಳು, ನಗರ ಪ್ರದೇಶಗಳಲ್ಲಿ ೧ ಲಕ್ಷ ಮನೆಗಳು ಹಾಗೂ ಕೊಳಗೇರಿಗಳಲ್ಲಿ ೯೭ ಸಾವಿರ ಮನೆಗಳ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದರು.
ಬಳ್ಳಾರಿಯಲ್ಲೂ ಸ್ಲಮ್ ಬೋರ್ಡ್ ವತಿಯಿಂದ, ೧೧೮೮ ಮನೆಗಳನ್ನ ನಿರ್ಮಿಸಲಾಗಿದ್ದು, ೧೬೧೩ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ೫೫೧ ಮನೆಗಳಿಗೆ ಇತ್ತೀಚೆಗೆ (ಕಳೆದ ತಿಂಗಳು) ಭೂಮಿ ಪೂಜೆ ಮಾಡಿದ್ದೇವೆ ಎಂದು ಹೇಳಿದ ಅವರು, ಹೀಗೆ ಜಿಲ್ಲೆಯಾದ್ಯಂತ ದುಡಿಯುವ ಕೈಗಳನ್ನ ಬಲ ಪಡಿಸೋ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಮತ್ತು ನಮ್ಮ ಸರ್ಕಾರ ಬದ್ಧವಿದ್ದು, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು ಮತ್ತು ಎಲ್ಲಾ ವಲಯಗಳಲ್ಲೂ ಅಭಿವೃದ್ಧಿ ಕಾಮಗಾರಿಗಳ ವೇಗವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲಾಗುವುದು ಎಂದರು.
ಇನ್ಮುಂದೆ ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಟುತ್ತಾ ಸಾಗೋಕೆ ಅವಕಾಶ ಕೊಡೋಲ್ಲ. ಇದನ್ನ ಅಧಿಕಾರಿಗಳಿಗೆ ಈಗಾಗಲೇ ಸ್ಪ? ಪಡಿಸಿದ್ದೇನೆ.
ಸಮಯ ಪಾಲನೆಯಿಂದ ಕೆಲಸ ಮಾಡಬೇಕು, ಜನರ ವಿ?ಯದಲ್ಲಿ ಅಸಡ್ಡೆ ತೋರಿದ್ರೆ ಕಠಿಣ ಕ್ರಮ ಎದುರಿಸಬೇಕಾಗುತ್ತೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.


ಅಭಿವೃದ್ಧಿ ವಿ?ಯದಲ್ಲಿ ಕಳೆದ ೭-೮ ವ?ಗಳಲ್ಲಿದ್ದ ಬಳ್ಳಾರಿ ಬೇರೆ, ಈಗ ಇನ್ನಷ್ಟು ಬೆಳವಣಿಗೆ ಆಗಲಿದೆ ಎಂದರು.
ರಾಜ್ಯದಲ್ಲಿ ಸುಮಾರು ೨,೮೦೦ ಸ್ಲಂಗಳಿದ್ದು, ೨.೮೦ ಲಕ್ಷ ಮನೆಗಳ ಬೇಡಿಕೆ ಇದೆ.
ಈ ನಿಟ್ಟಿನಲ್ಲಿ ಈ ಹಿಂದೆ ೮೩,೧೧೯ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ಸುಮಾರು ೫೦ ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡು, ಸುಮಾರು ೩೩ ಸಾವಿರ ಮನೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ನಮ್ಮ ಸರ್ಕಾರದಿಂದ ಹೊಸ ಪ್ಯಾಕೇಜ್‌ನಲ್ಲಿ ಸುಮಾರು ೯೭,೧೩೪ ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.
ಮನೆ ಇಲ್ಲದ ಬಡವರಿಗೆ ಮನೆ ನೀಡುವುದು ನಮ್ಮ ಆದ್ಯತೆ ಆಗಿದ್ದು, ಇತ್ತೀಚೆಗೆ ನಮ್ಮ ಸರ್ಕಾರವು ೬,೬೧೨ ಕೋಟಿ ವೆಚ್ಚದಲ್ಲಿ ಒಟ್ಟು ೫ ಲಕ್ಷ ಹೊಸ ಮನೆಗಳ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿದೆ ಮತ್ತು ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಡುತ್ತಿದ್ದು, ಕಾಮಗಾರಿಗಳನ್ನು ಆದ್ಯತೆ ಮೇಲೆ ಮುಗಿಸುವ ಕೆಲಸ ನಡೆಸಲಾಗುವುದು ಎಂದರು.
ಇದೀಗ ನಿರ್ಮಾಣ ಆಗಲಿರುವ ಕಾಮಗಾರಿಗಳಲ್ಲಿ ಅಧಿಕಾರಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಹಾಗೂ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಬಾರದು ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಸಿರುಗುಪ್ಪ ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳು ಸೇರಿದಂತೆ ಇನ್ನೀತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top