ಕಳಪೆ ಕಾಮಗಾರಿ ಮಾಡಿದರೆ ಕಪ್ಪು ಪಟ್ಟಿ ಸೇರಿಸುವ ಎಚ್ಚರಿಕೆ: ಶಾಸಕ ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ: ಸರ್ಕಾರದಿಂದ ಬರುವ ಅನುದಾನ ಸಾರ್ವಜನಿಕರ ಸದುಪಯೋಗಕ್ಕಾಗಿ ಇದ್ದು, ಕಾಮಗಾರಿಗಳ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು. ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ 2021-22 ನೇ ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ ವಾರ್ಡ್ ನಂಬರ್ 3 , 11, 12 , 17 ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಲಾಯಿತು.


ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿನ 1, 5 ಮತ್ತು 11 , 23 ನೇ ವಾರ್ಡ್ ನಲ್ಲಿ ಯು.ಜಿ.ಡಿ ನಿರ್ಮಾಣ ಕಾಮಗಾರಿ, 4, 16, 17,19,21, 22, 23 ಮತ್ತು 2 ರಲ್ಲಿ ಸಿ.ಸಿ.ರಸ್ತೆ ಕಾಮಗಾರಿ, ಹಾಗೂ ವಾರ್ಡ್ 10 ರಲ್ಲಿ ಒಣತ್ಯಾಜ್ಯ ಸಂಗ್ರಹಣಾ ಘಟಕ ಮುಂದುವರಿದ ಕಾಮಗಾರಿ ಮಾಡುತ್ತಿದ್ದು ಒಟ್ಟು ಒಂದು ಕೋಟಿ ವೆಚ್ಚದಲ್ಲಿ ಆಗುತ್ತಿರುವ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಕಳಪೆ ಕಾಮಗಾರಿ ಮಾಡಿರುವುದು ನನ್ನ ಗಮನಕ್ಕೆ ಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು. ನಗರೋತ್ಥಾನದಲ್ಲಿ 10 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದೆ. ಬಯಪಾದಿಂದ 15 ಕೋಟಿ ರೂಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಪಿಡ್ಬ್ಲೂಡಿ ಯಲ್ಲಿ ಐದು ವರೆ ಕೋಟಿ ರೂಗಳ ಅನುದಾನ ದಲ್ಲಿ ಕಾಮಗಾರಿ ಮಾಡಿಸುತ್ತಿದ್ದು ಪಟ್ಟಣದ ಸಮಗ್ರ ಅಭಿವೃದ್ಧಿ ಗೆ ಬೇಕಾದ ವ್ಯವಸ್ಥೆ ಮಾಡಿದ್ದೇನೆ.

ಮನೆಗಳ ಮಂಜೂರಾತಿ ಯಲ್ಲಿ ಬಹಳಷ್ಟು ಜನರಿಗೆ ಮನೆ ಮಂಜೂರಾಗಿದೆ, ಉಳಿದ ಅರ್ಜಿದಾರರಿಗೆ ಶೀಘ್ರವೇ ಮನೆ ಮಂಜೂರು ಮಾಡಲು ಅಧಿಕಾರಿ ವರ್ಗಕ್ಕೆ ತಿಳಿಸುತ್ತೇನೆ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಪಟ್ಟಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಆಸೀಫ್, ಟೌನ್ ಅಧ್ಯಕ್ಷ ಭಾಸ್ಕರ್, ವಿಜಯಪುರ ಪುರಸಭಾ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಕೇಶವಪ್ಪ, ಪುರಸಭಾ ಮುಖ್ಯಾಧಿಕಾರಿ ಮೋಹನ್ ಕುಮಾರ್, ಸದಸ್ಯರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top