ಕೊಪ್ಪಳ : ಈ ದೇಶದ ಆರ್ಥಿಕ ಮತ್ತು ಸಮಾಜಿಕ ಸಮಾನತೆಗಾಗಿ ಹಗಲಿರುಳು ಶ್ರಮಿಸಿ ದೇಶಕ್ಕೊಂದು ಸಂವಿಧಾನ ಬರೆದ ಮಹಾನ್ ದೇಶ ಭಕ್ತ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಎಂದು ಪ್ರೋ ಶ್ರೀ ಲಿಂಗಣ್ಣ ಜಂಗಮರ ಹಳ್ಳಿ ಮಾತಾನಾಡಿದರು.ತಾಲೂಕಿನ ಉಳೇನೂರು ಗ್ರಾಮದಲ್ಲಿ ಬುದ್ಧ ಬಸವ ಅಂಬೇಡ್ಕರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ ಅವರ 131ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುತ್ತಾ ಮಾತಾನಾಡಿದ ಅವರು ಬಾಬಾ ಸಾಹೇಬರ ಬದುಕೊಂದು ಪುಟಕ್ಕಿಟ್ಟ ಚಿನ್ನದಂತೆ ವಿಧ್ಯಾರ್ಥಿ ದೆಸೆಯಲ್ಲಿ ಅಸ್ಪೃಷ್ಯತೆಯ ಸೋಂಕಿನಲ್ಲಿ ಬಳಲಿದರಲ್ಲದೆ ಕೌಟುಂಬಿಕವಾಗಿ, ಸಾಮಾಜಿಕವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರು ಸಹಿತ ಛಲದಂಕ ಮಲ್ಲರಾಗಿ ದೀನ-ದಲಿತರ ದಮನಿತರ, ಮಹಿಳೆಯರ, ಶೋಷಿತರ ಹಕ್ಕುಗಳಿಗಾಗಿ ಜೀವನದ ಕೊನೆಯುಸಿರಿರುವರೆಗೂ ಹೋರಾಡಿದ ಮಹಾನಾಯಕ ಎಂದರು.
1929ರಲ್ಲಿಯೇ ಬ್ರಿಟೀಷರ ಕಪಿ ಮುಷ್ಟಿಯಿಂದ ದೇಶ ಸ್ವಾತಂತ್ರ್ಯ ಪಡೆಯಬೇಕಿತ್ತು ಆದರೆ ಇಲ್ಲಿನ ಜಾತಿಯತೆ ಮತ್ತು ಒಳ ಜಗಳಾಟಗಳ ತಿಕ್ಕಾಟದಿಂದ ಹಾಗೂ ದೇಶವನ್ನು ಮುನ್ನೆಡೆಸುವ ಸ್ಪಷ್ಟತೆ ಯಾರಲ್ಲಿ ಇಲ್ಲವಾದ್ದರಿಂದ ತಪ್ಪಿ ಹೋಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶಕ್ಕೊಂದು ಸಂವಿಧಾನವನ್ನು ಅಂಬೇಡ್ಕರರೇ ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ರೋಚಕ ಇತಿಹಾಸವೆಂದು ಬಣ್ಣಿಸಿದರು. ಇಂದು ನಾವೆಲ್ಲ ಅಂತಹ ಮಹಾತ್ಮನನ್ನು ಪೂಜೆಗಷ್ಟೇ ಬಳಸಿಕೊಳ್ಳದೆ ಅವರ ದೂರದೃಷ್ಟಿಕೋನದ ಸಂವಿಧಾನ ಉಳಿಸುವ ಕಾರ್ಯದಲ್ಲಿ ನಿರತರಾಗಬೇಕೆಂದರು.ಸಮಾಜ ಚಿಂತಕ ರವಿ ಬಡಿಗೇರ ಮಾತಾನಾಡಿ ಬುದ್ಧ ಬಸವ ಅಂಬೇಡ್ಕರರು ಸಮಾನತೆಗಾಗಿ ಹೋರಾಡಿದ ಮಹಾ ಮಹಿಮರು ಅವರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಅವರ ಜಯಂತಿಯನ್ನು ಜಾತ್ಯಾತೀತವಾಗಿ ಆಚರಿಸಬೇಕೆಂದರು.ಮಾಜಿ ಸಚಿವರಾದ ಶಿವರಾಜ ತಂಗಡಿಗಿ ಮಾತಾನಾಡಿ ಅಂಬೇಡ್ಕರರ ಜಯಂತಿ ದಿನ ಯುವಕರು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸಿ ಅಸಭ್ಯವಾಗಿ ವರ್ತಿಸಿದರೆ ಅದು ಮಹಾತ್ಮರಿಗೆ ಮಾಡುವ ಅಪಚಾರ ಹಾಗಾಗಬಾರದು. ಉಳೇನೂರು ಗ್ರಾಮದ ಜನಗಳು ಒಗ್ಗಟ್ಟಾಗಿ ಶಿಸ್ತುಬದ್ದವಾಗಿ ಅಂಬೇಡ್ಕರರ ಜಯಂತಿಯನ್ನು ವಿಶೇಷ ಉಪನ್ಯಾಸ ಹಮ್ಮಿಕೊಂಡು ಆಚರಿಸಿರುವುದು ಶ್ಳಾಘನೀಯ ಎಂದರು.
ದಿವ್ಯ ಸಾನಿದ್ಯ ವಹಿಸಿಕೊಂಡು ಮಾತಾನಾಡಿದ ಬಸವಕಲ್ಯಾಣ ಗುಣತೀರ್ಥ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತಾನಾಡಿ ದೇಶದಲ್ಲಿ ಸ್ವಾತಂತ್ರ್ಯ ಸಂವಿಧಾನ ಬಂದು 75ವರ್ಷ ಕಳೆದಿದೆ ಅದರ ನೆನಪಿಗಾಗಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಆದರೆ ಕೆಲವು ಗ್ರಾಮಗಳಲ್ಲಿ ದಲಿತರಿಗೆ ಕಟ್ಟಿಂಗ್ ಮಾಡುತ್ತಿಲ್ಲ, ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ ಇದು ನಮ್ಮ ದೇಶದ ಸ್ವಾತಂತ್ರ್ಯತೆಗೆ ಅವಮಾನಕರ ಸಂಗತಿ ಇದು ತೊಲಗಿದಾಗ ಮಾತ್ರ ದೇಶಕ್ಕೆ ಪೂರ್ಣ ಸ್ವಾತಂತ್ರ್ಯ ಬಂದಂತಾಗುವುದು ಎಂದರಲ್ಲದೆ ಉಳೇನೂರು ಊರಲ್ಲಿ ಅಸ್ಪೃಷ್ಯತೆ ಆಚರಣೆ ನಿಲ್ಲಿಸಿರುವುದು ಉತ್ತಮ ಬೆಳವಣಿಗೆ ಎಂದರು. ಊರಿನಲ್ಲಿ ಸಾಮರಸ್ಯದ ವಾತಾವರಣವನ್ನುಂಟು ಮಾಡಲು ಪ್ರತೀವರ್ಷ ಬುದ್ಧ ಬಸವ ಅಂಬೇಡ್ಕರರ ಹೆಸರಲ್ಲಿ ಸಮ್ಮೇಳನಗಳನ್ನು ನಡೆಸಬೇಕೆಂದು ಅಭೀಪ್ರಾಯಪಟ್ಟರು.ಮೌನೇಶ ದಡೆಸೂಗರು, ಶಿವ ಶರಣ ಗದುಗೆಪ್ಪ ಮಾತಾನಾಡಿದರು. ಗಂಗರಾಜ ಅಳ್ಳಳ್ಳಿ ಪ್ರಾಸ್ತಾವಿಕಾವಾಗಿ ಮಾತಾನಾಡಿದರು.ನೂತನವಾಗಿ ಬುದ್ಧ ಬಸವ ಅಂಬೇಡ್ಕರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಉದ್ಘಾಟನೆಯಾಯಿತು ಸಂಘದ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.ಶ್ರೀಮತಿ ಯಲ್ಲಮ್ಮ, ಕಾಸೀಂ ಸಾಬ, ನಾಗರಾಜ ಹಳ್ಳದ, ಕಾಜೀರಪ್ಪ ಅಳ್ಳಳ್ಳಿ, ರಾಯಚೂರು ಪ್ರಾಂಶುಪಾಲರಾದ ಸೋಮನಾಥ, ಎಮ್ ಗವಿಸಿದ್ದಪ್ಪ, ಸೋಮಲಿಂಗಪ್ಪ, ಹೊನ್ನೂರಪ್ಪ, ಮಾರೇಪ್ಪ, ಲಕ್ಷ್ಮಣ ಕಾರಟಗಿ, ಆಂಜಿನಯ್ಯ ಅಳ್ಳಳ್ಳಿ, ಬಸವರಾಜ, ಮಲ್ಲಿಕಾರ್ಜುನ ಗೌಡ, ಸಿದ್ಧಪ್ಪ ಮೈಲಾಪೂರು, ಹುಲಿಗೆಪ್ಪ ಪಾಳೆ, ಬಸವರಾಜ ದಮ್ಮೂರು, ಹಾವಣ್ಣ, ಗಾಧಿಲಿಂಗಪ್ಪ, ಉಪಸ್ಥಿತರಿದ್ದರು. ಆರತಿ ರಂಜನಿ ಜನನಿ ಕಲಾ ಬಳಗದವರು ಕ್ರಾಂತಿಗೀತೆಗಳಿಂದ ನೆರೆದ ಜನರನ್ನು ಉರಿದುಂಬಿಸಿದರು, ಮಕ್ಕಳಿಂದ ಕೋಲಾಟ, ನೃತ್ಯ ಗಮನ ಸೆಳೆಯಿತು. ವೀರೇಶ ಸ್ವಾಗತಿಸಿದರೆ, ಭೀಮೇಶ ಬೂದುಗುಂಪಾ ನಿರೂಪಿಸಿದರು, ವೀರೇಶ ಗಂಗಾವತಿ ವಂದಿಸಿದರು.