ಬಳ್ಳಾರಿ,ಮಾ,17 : ದಿವಂಗತ ಡಾ.ಪುನೀತ್ ರಾಜಕುಮಾರ್ ಅವರು ಜೀವನದಲ್ಲಿನ ಆದರ್ಶಗಳು, ಸಮಾಜಸೇವಗಳು, ಯುವಕರು ನಿತ್ಯ ನಿರಂತರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಬೇಕು ಹಾಗೂ ಚಲನಚಿತ್ರದಲ್ಲಿ ಇರುವ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪಿಡಿ ಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಶಿಧರ್ ವೈ. ತಿಮ್ಮಪ್ಪ ತಿಳಿಸಿದರು. ನಗರದ ದೊಡ್ಡ ಮಾರುಕಟ್ಟೆಯ ಅಪ್ಪು ಸೇವಾ ಸಮಿತಿಯ ಕಚೇರಿಯ ಆವರಣದಲ್ಲಿ ಇಂದು ದಿವಂಗತ ಡಾ.ಪುನೀತ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ಅಪ್ಪು ಸೇವಾ ಸಮಿತಿ ಮತ್ತು ಸ್ಪಂದನ ರಕ್ತನಿಧಿ ಕೇಂದ್ರ ನೇತೃತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತ್ತು.
ಈ ಸಮಯದಲ್ಲಿ ಪಿಡಿ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಶಶಿಧರ್ ವೈ ಮಾತನಾಡಿದ ಅವರು ದಿವಂಗತ ಡಾ.ಪುನೀತ್ ರಾಜಕುಮಾರ್ ಅವರು ಜೀವನದಲ್ಲಿನ ಆದರ್ಶಗಳು, ಸಮಾಜಸೇವಗಳು, ಯುವಕರು ನಿತ್ಯ ನಿರಂತರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಬೇಕು ಹಾಗೂ ಚಲನಚಿತ್ರದಲ್ಲಿ ಇರುವ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿ ವರ್ಷ ಅಫ್ಉ ಅವರು ಹುಟ್ಟು ಹಬ್ಬಕ್ಕೆ ರಕ್ತದಾನ ಶಿಬಿರ ಮಾಡಿಕೊಂಡು ಬಂದಿದೆವೆ ಎಂದರು. ಇಂದು ಬೆಳಿಗ್ಗೆ 11 ಗಂಟೆ ಒಳಗೆ 50 ಕ್ಕಿಂತ ಹೆಚ್ಚಿನ ಯುವಕರು, ಹಿರಿಯರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ್ ಆಚಾರ್, ಬ್ರೂಸ್ ಪೇಟೆ ಠಾಣೆಯ ಇನ್ಸ್ಪೆಕ್ಟರ್ ಷಣ್ಮುಖಪ್ಪ, ಹತ್ತನೇ ವಾರ್ಡನ ಮಹಾನಗರ ಪಾಲಿಕೆ ಸದಸ್ಯ ತಿಲಕ್, ಅಪ್ಪು ಸೇವಾ ಸಮಿತಿಯ ಸಿದ್ದಮಲ್ ಮಂಜುನಾಥ, ವಸಂತ ಕುಮಾರ್, ಕುಂದಾಪುರ ನಾಗರಾಜ್, ಹನುಮಂತಪ್ಪ, ಗುಡಿಗಂಟೆ ಮಂಜುನಾಥ, ಹೆಚ್.ರವಿ ಕುಮಾರ್ , ರಾಜೇಶ್ ಹುಂಡೆಕರ್, ಕೇದರನಾಥ , ಲಕ್ಷ್ಮೀಕಾಂತ ರೆಡ್ಡಿ, ಚಂದ್ರಶೇಖರ್, ಹರ್ಷವರ್ಧನ, ವಿನಯ ಕುಮಾರ್ ಭಾಗವಹಿಸಿದ್ದರು.