ಕುಷ್ಟಗಿ,ಮಾ,9 : ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಅಗಲಿದ ಉತ್ತರ ಕರ್ನಾಟಕದ ಖ್ಯಾತ ಹಾರ್ಮೋನಿಯಂವಾಕರು ಹಾಗೂ ಬಾಗಲಕೋಟ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಕುಷ್ಟಗಿ ದಿ// ಐ.ಡಿ.ಬಾಬು ಇವರ ಸವಿನೆನಪಿಗಾಗಿ ಶ್ರೀ ನಿಧಿ ಸಂಗೀತ ಪಾಠ ಶಾಲೆ ಕುಷ್ಟಗಿ ಬಳಗದವರಿಂದ ನುಡಿನಮ ಕಾರ್ಯಕ್ರಮವನ್ನು ೧೧-೦೩-೨೦೨೨ ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಿಧಿ ಸಂಗೀತ ಪಾಠ ಶಾಲೆ ಅಧ್ಯಕ್ಷ ನವಲಿ ಹಿರೇಮಠ ಹೇಳಿದರು. ನಂತರ ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯನ್ನು ನೆಡೆಸಿ ಮಾತನಾಡಿದ ಅವರು ದಿ.ಐ.ಡಿ ಬಾಬು ನಮ್ಮ ಭಾಗದ ಹೆಮ್ಮೆಯ ರಂಗಭೂಮಿ ಕಲಾವಿದರಾಗಿದ್ದರು ಅವರ ಅಗಲುಕೆಯಾದ ನಂತರ ಬಹಳಷ್ಟು ರಂಗಭೂಮಿ ಕಲೆ ಕಲಿಸುವಂತ ಶಿಕ್ಷಕರು ಇಲ್ಲದಂತಾಗಿದ್ದು ಆದ್ದರಿಂದ ಅವರು ಕಲಿಸಿದ ಸಂಗೀತ ಮತ್ತು ಹಾರ್ಮೋನಿಯಂ ಹಾಗೂ ನಾಟಕ ಕಲೆ ಬಹಳ ಈ ಸಮಾಜದಲ್ಲಿ ಮೆಚ್ಚುಗೆಯನ್ನು ಪಡೆದಿವೆ. ಅದರಂತೆ ಅವರ ವ್ಯಕ್ತಿತ್ವಗಳು ಸಮಾಜಕ್ಕೆ ಒಳಿತಿಗಾಗಿದ್ದು ಅವರುಗಳನ್ನು ಸ್ಮರಿಸಲು ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ, ಶೇಂಕ್ರಯ್ಯ ಕಂಪಾಪೂರಮಠ, ಆದಯ್ಯ ಭಾಗಲವಾಡಮಠ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.