ದೇವನಹಳ್ಳಿ: ದೇವನಹಳ್ಳಿಯಲ್ಲಿ ನಡೆಯುವ ಶ್ರೀ ಅಣ್ಣಮ್ಮ ದೇವಿ, ಚೌಡೇಶ್ವರಿ ದೇವಿ, ಕೋಟೆ ಮಾರಮ್ಮದೇವಿ, ದೊಡ್ಡಮ್ಮದೇವಿ, ಪೂಜಮ್ಮ ದೇವಿ ಮತ್ತು ಮುನೇಶ್ವರಸ್ವಾಮಿ ದೇವರುಗಳ 11ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ಆರ್ಥಿಕ ನೆರವು ನೀಡಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶ್ರೀ ಅಣ್ಣಮ್ಮದೇವಿ ಸೇವಾ ಅಭಿವೃದ್ಧಿ ಟ್ರಸ್ಟ್, ಸರೋವರ ಬೀದಿ ಮಾರುತಿ ಯುವಕರ ಬಳಗದ ವತಿಯಿಂದ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಧನಸಹಾಯವನ್ನು ಮಾಡಿ ಅವರು ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗಗಳ ಹಾವಳಿಯಿಂದಾಗಿ ಜಾತ್ರೆಗಳು ನಡೆಯದೆ ಊರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಠಿಯಾಗಿ 2 ವರ್ಷಗಳೇ ಆಗಿದೆ. ಪ್ರತಿ ವರ್ಷ ನಡೆಯುವ ಜಾತ್ರ ಕಾರ್ಯಕ್ರಮಗಳಿಗೆ ಕೋವಿಡ್ ಅಡ್ಡಿಯಾಗಿತ್ತು. ಇದೀಗ ಸಾಂಪ್ರದಾಯಿಕ ಹಬ್ಬಗಳಿಗೆ ಹಸಿರು ನಿಶಾನೆ ದೊರೆತಿದ್ದು, ಎಂದಿನಂತೆ ಭಕ್ತಿ, ಪೂಜಾಕೈಂಕರ್ಯಗಳು, ಜಾತ್ರ ಮಹೋತ್ಸವಗಳು ಜರುಗುತ್ತಿರುವುದು ಸಂತಸವನ್ನು ತಂದಿದೆ. ಪ್ರತಿಯೊಬ್ಬರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ತಾಲ್ಲೂಕಿನಲ್ಲಿ ಮಳೆ ಬೆಳೆ ಕಾಲಕಾಲಕ್ಕೆ ಆಗಲಿ ಎಂದು ಪ್ರಾರ್ಥನೆಯನ್ನು ಮಾಡುವಂತಾಗಬೇಕು ಎಂದರು.ಈ ವೇಳೆಯಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕಾಂಗ್ರೆಸ್ ಮುಖಂಡ ತ್ಯಾಗರಾಜು, ಯುವ ಕಾಂಗ್ರೆಸ್ ಮುಖಂಡರು, ಶ್ರೀ ಅಣ್ಣಮ್ಮದೇವಿ ಟ್ರಸ್ಟ್‌ನ ಸದಸ್ಯರು ಮತ್ತು ದೇವನಹಳ್ಳಿಯ ಕಾಂಗ್ರೆಸ್ ಮುಖಂಡರು ಮತ್ತಿತರರು ಇದ್ದರು.