ಪ್ರಜಾತಾಂತ್ರಿಕ ಶಿಕ್ಷಣವನ್ನು ಉಳಿಸಲು ವಿದ್ಯಾರ್ಥಿಗಳ ಸಂಕಲ್ಪ

ಕಂಪ್ಲಿ ,ಫೆಬ್ರವರಿ,15 : ಇಂದು AIDSO ವತಿಯಿಂದ ಭಗತ್ ಸಿಂಗ್, ನೇತಾಜಿ ಕನಸಿನ ವೈಜ್ಞಾನಿಕ-ಧರ್ಮನಿರಪೇಕ್ಷ-ಪ್ರಜಾತಾಂತ್ರಿಕ ಶಿಕ್ಷಣ ನಮ್ಮದಾಗಲಿ ಎಂದು ವಿದ್ಯಾರ್ಥಿಗಳ ಸಂಕಲ್ಪ ಅಭಿಯಾನವನ್ನು ವಿದ್ಯಾರ್ಥಿಗಳು ಎಪಿಎಂಸಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ, ಕೋಮು ಸಂಘರ್ಷದ ಘಟನೆಗಳು ಜರುಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ AIDSO ರಾಜ್ಯ ಸಮಿತಿ, ಮಹಾನ್ ವ್ಯಕ್ತಿಗಳ, ನವೋದಯ ಚಿಂತಕರ ಧರ್ಮನಿರಪೇಕ್ಷತ, ವೈಜ್ಞಾನಿಕ ವಿಚಾರಗಳನ್ನು ಕೊಂಡೊಯ್ಯುವ ಅವಶ್ಯಕತೆಯನ್ನು ಮನಗಂಡು ಇಂದಿನಿಂದ ರಾಜ್ಯವ್ಯಾಪಿ ಪ್ರಚಾರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ, ಹಾಗೂ ನವೋದಯ ಚಿಂತಕರಾದ ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಂ ಮೋಹನ್ ರಾಯ್ ಹಾಗೂ ವಿವೇಕಾನಂದರು ಇವರುಗಳ ವಿಚಾರವನ್ನು ಎಲ್ಲೆಡೆ ಹರಡುವ ಕಾರ್ಯದಲ್ಲಿ ತೊಡಗಿದ್ದೇವೆ.

‘ವೈಜ್ಞಾನಿಕ – ಧರ್ಮನಿರಪೇಕ್ಷ – ಪ್ರಜಾತಾಂತ್ರಿಕ ಶಿಕ್ಷಣ ನಮ್ಮದಾಗಲಿ’ ಎಂಬ ಘೋಷಣೆಯೊಂದಿಗೆ, ಮಹಾನ್ ವ್ಯಕ್ತಿಗಳ ಸೂಕ್ತಿ ಇರುವ ಪ್ಲಾಕಾರ್ಡ್ ಹಿಡಿದು, ನಗರದ ಮೈದಾನಗಳಲ್ಲಿ, ಕ್ರೀಡಾಂಗಣ, ಕಾಲೇಜುಗಳು, ಹಾಸ್ಟೆಲ್ ಗಳಲ್ಲಿ ಪ್ರಚಾರ ನಡೆಸುತ್ತಿದ್ದೇವೆ. ಇದರೊಂದಿಗೆ ನೇತಾಜಿ ಅವರ 125ನೇ ಜನ್ಮ ವಾರ್ಷಿಕದ ಮಹತ್ವವನ್ನು ವಿದ್ಯಾರ್ಥಿಗಳು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಅವರ ವಿಚಾರದ ಕುರಿತು ಹಲವು ಚರ್ಚೆಗಳು, ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲ ವಿದ್ಯಾರ್ಥಿಗಳ ಐಕ್ಯತೆಯನ್ನು ಕಾಪಾಡಲು AIDSO ಈ ಅಭಿಯಾನವನ್ನು ಕೈಗೆತ್ತಿಕೊಂಡಿದೆ ಹಾಗೂ ಇಂದು ನಾವು ಎದುರಿಸುತ್ತಿರುವ ಹಲವು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಒಂದಾಗಿ ಹೋರಾಡಲು AIDSO ಕರೆ ನೀಡುತ್ತದೆ. ಈ ಸಂದರ್ಭದಲ್ಲಿ ಎಐಡಿಎಸ್ಓ ಕಛೇರಿ ಕಾರ್ಯದರ್ಶಿ ಕೆ.ಈರಣ್ಣ, ಸದಸ್ಯರು ತಿಪ್ಪೇರುದ್ರ, ಜಡೇಶ್, ಶೇಕ್ಷವಲಿ, ಹಾಗೂ ವಿದ್ಯಾರ್ಥಿಗಳಾದ ಪಕ್ಕೀರ, ಪ್ರಜ್ವಲ್, ಅಭಿರಾಮ್, ವೀರೇಶ್ ಮತ್ತಿತರರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top