ಕೊಪ್ಪಳ,13 : ಹಿಜಾಬ್ ಹಾಗೂ ಕೇಸರಿ ಶಾಲು ನಡುವಿನ ಗಲಾಟೆ ತಾರಕಕ್ಕೇರಿದೆ. ಈ ವಿವಾದದ ಬಗ್ಗೆ ಹೈಕೋರ್ಟ್ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಂಘರ್ಷ ನಡೆಯುತ್ತಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಗಲಾಟೆ ನಡೆಯದೆ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪಥ ಸಂಚಲನ ನಡೆಸಿ ಕಟ್ಟೆಚ್ಚರ ವಹಿಸಿದ್ದಾರೆ.
ಭಾನುವಾರ ದಂದು ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿಗೆ ಧಕ್ಕೆಯನ್ನುoಟು ಮಾಡುವ ಮತ್ತು ಕೋಮುಗಲಬೆ ಸೃಷ್ಟಿಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ದೃಷ್ಟಿಯಿಂದ ಹಾಗೂ ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಇರುವ ಬಗ್ಗೆ, ಕೊಪ್ಪಳ ನಗರದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಪಥ ಸಂಚಲನ ಆರಂಭಿಸಿದ ಪೊಲೀಸರು ನಗರದ ಜವಾಹರ ರಸ್ತೆ, ಸಾಲರಜಂಗ್, ಕಿನ್ನಾಳ ರಸ್ತೆ, ಭಾಗ್ಯನಗರ ಹಾಗೂ ಪ್ರಮುಖ ಬೀದಿಗಳಲ್ಲಿ, ವಿವಿಧ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಕೊಪ್ಪಳ ಡಿವೈಎಸ್ಪಿ ಗೀತಾ ಬೇನಾಳ ನೇತೃತ್ವದಲ್ಲಿ ಪೊಲೀಸರ ಪಥ ಸಂಚಲನ ನಡೆಯಿತು. ರೂಟ್ ಮಾರ್ಚನಲ್ಲಿ ಡಿ.ಎಸ್.ಪಿ, ಡಿ.ಎ.ಆರ್, ಸಿಪಿಐ ಕೊಪ್ಪಳ ನಗರ, ಗ್ರಾಮೀಣ, ಯಲಬುರ್ಗಾ, ಪಿಐ, ಡಿಸಿಆರ್ ಬಿ, ಡಿಎಸ್ ಬಿ, ಪಿಐ ಕಂಟ್ರೋಲ್, ಇತರ ಪೊಲೀಸ್ ಅಧಿಕಾರಿಗಳು, ಶಸಸ್ತ್ರ ಪೊಲೀಸ್, ರಾಪಿಡ್ ಆಯಕ್ಷನ್ ಫೋರ್ಸ್, ಕೆಎಸ್ಆರ್.ಪಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.