ಕೊಪ್ಪಳ,ಜನವರಿ, 20 : ಚಳಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ,ಕೊಪ್ಪಳ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ “ಹದಿ-ಹರೆಯದವರಿಗಾಗಿ, ಆರೋಗ್ಯ ಮತ್ತು ಕ್ಷೇಮ” ದಿನಾಚರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಚಳಗೇರಾದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢ ಶಾಲೆಯ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಶ್ರೀ ಶಿವಲಿಂಗಪ್ಪ ಕುಷ್ಟಗಿ,ಅವರು ನೆರವೇರಿಸಿ ಮಾತನಾಡಿ ಪ್ರಸ್ತುತ ದಿನ ಮಾನಗಳಲ್ಲಿ ಹಣಕ್ಕಿಂತ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಇದ್ದು ಪ್ರತಿಯೊಬ್ಬರೂ ನಮ್ಮ “ಆರೋಗ್ಯ ರಕ್ಷಣೆ” ನಮ್ಮೆಲ್ಲರ ಹೊಣೆ ನಾವು ಚನ್ನಾಗಿದ್ದರೆ ಜೀವನದಲ್ಲಿ ಏನಾದರೂ ಮಾಡಲು ಸಾಧ್ಯ ಎಂದು ತಿಳಿಸಿದರು.
“ಬಾಲ್ಯ ವಿವಾಹ” ಕುರಿತು ಮಕ್ಕಳ ಬಾಲ್ಯ ವಿವಾಹ ತಡೆಗಟ್ಟಬೇಕು ಎಂದು ಜಾಗೃತಿ ಮೂಡಿಸಿದರು.. ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ಶರಣಪ್ಪ ರಾಜೂರ ಮಾತನಾಡಿದರು. ಆರೋಗ್ಯ ಇಲಾಖೆ, ಕುಷ್ಟಗಿಯ ಕೆ,ಎಸ್,ಮಾಗಿ. ತಾವರಗೇರಾದ ಆಪ್ತ ಸಮಾಲೋಚಕರಾದ ಅರುಣ್ ಕುಮಾರ ಹಿರೇಮಠ, ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು. ಪ್ರೌಢ ಶಾಲೆಯ ಶಿಕ್ಷಕರುಗಳಾದ ವಿಶಾಲಾಕ್ಷಮ್ಮ, ಅರವಿಂದಕುಮಾರ ದೇಸಾಯಿ, ಶಾಕೀರ್ ಬಾಬಾ, ಶರಣಪ್ಪ ಪರಾಸಾಪೂರ, ಸಿದ್ದನಗೌಡ ಪೊಲೀಸ್ ಪಾಟೀಲ್, ಬಸವರಾಜ ಪಿ. ವೇದಿಕೆಯಲ್ಲಿದ್ದರು.ಸ್ನೇಹ ಏನ್, ಜೀ, ಓ.ದ ಸದಸ್ಯರು ಸುರೇಶ ದಾಸರ ತಾಲೂಕು ಸಂಯೋಜಕರುಗಳಾದ ಲೋಕಪ್ಪ ಪೂಜಾರ..ಪೂಜಾ ಗುಡುಗುಡಿ ಹಾಜರಿದ್ದರು.
ಅಧ್ಯಕ್ಷತೆಯನ್ನು ಪ್ರೌಢ ಶಾಲೆಯ ಮುಖೋಪಾಧ್ಯಾಯರಾದ ರಾಯಪ್ಪ ಹೂಗಾರ ವಹಿಸಿ ಮಾತನಾಡಿದರು. 8 ನೇ ತರಗತಿ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ, ಪೂಜಾ, ವಿಜಯಲಕ್ಷ್ಮೀ ಗೊಡ್ಡಳ್ಳಿ, ಪ್ರಾರ್ಥಿಸಿದರು.. ಶಿಕ್ಷಕ ಶರಣಪ್ಪ ಪರಾಸಾಪುರ ಸ್ವಾಗತಿಸಿದರು.. ಸಿದ್ದನಗೌಡ ಪೊಲೀಸ್ ಪಾಟೀಲ್ ವರದಿಸಿದರು.. ಅರವಿಂದಕುಮಾರ ದೇಸಾಯಿ ನಿರೂಪಿಸಿದರು. ಶಾಲಾ ಸಿಬ್ಬಂದಿ ಯಂಕವ್ವ ವಡ್ಡರ್, ಶರೀಫಾಬಿ,. ಬೀ,ಎಡ್ ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್.ವೀರೇಶ್ ಹಾದಿಮನಿ,ಪೂರ್ಣಿಮಾ ಅರಹುಣಸಿ, ಹಾಗೂ ಮಂಜುಳಾ ಗುರುವಿನ್,ಹಾಜರಿದ್ದರು.