ವಿಜಯನಗರ,ಜ,6 : ಚುನಾವಣೆಗಳು ಮುಗಿಯುವವರೆಗೂ ಸುಮ್ಮನಿದ್ದ ಸರ್ಕಾರ ಇದೀಗ ದಿಢೀರನೆ ಕೋವಿಡ್ ನಿಯಮಗಳನ್ನು ಹೇರುವ ಮೂಲಕ ಜನ ಸಾಮಾನ್ಯರ ಬದುಕಿನೊಂದಿಗೆ ಆಟವಾಡುತ್ತಿದೆ ಎಂದು ಅತಿಥಿ ಉಪನ್ಯಾಸಕ ಅಕ್ಕಿ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು. ನಗರದ ಶ್ರೀ ಶಂಕರ ಆನಂದಸಿಂಗ್ ಪ್ರಥಮದರ್ಜೆ ಕಾಲೇಜ್ ನ ಆವರಣದಲ್ಲಿ ಇಂದು 27ನೇ ದಿನದ ಅತಿಥಿ ಉಪನ್ಯಾಸಕ ಧರಣಿ ಮುಂದುವರುತ್ತಿದೆ. ಈ ಸಮಯದಲ್ಲಿ ಅತಿಥಿ ಉಪನ್ಯಾಸಕರಾದ ಅಕ್ಕಿ ಮಲ್ಲಿಕಾರ್ಜುನ ಮಾತನಾಡಿದ ಅವರು ಜನವರಿ 7 ರಂದು ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರ್ಯಾಲಿಗೆ ನಡೆಸಲು ಅನುಮತಿಗಾಗಿ ಮನವಿ ಪತ್ರ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಡಿಸೆಂಬರ್ 4 ರಂದು ಕೊರೊನಾ ನಿಯಮ ಜಾರಿಯಾದ ಹಿನ್ನಲೆಯಲ್ಲಿ ಧರಣಿಗೆ ಅನುಮತಿಯನ್ನು ನೀಡುವುದಿಲ್ಲ ಎಂದು ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಮತ್ತು ಪೊಲೀಸ್ ಉಪ ವಿಭಾಗಾಧಿಕಾರಿ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಅವರು ಅತಿಥಿ ಉಪನ್ಯಾಸಕರ ಅರ್ಜಿಗೆ ಹಿಂಬರಹವನ್ನು ಬರೆದು ಕೊಟ್ಟಿದ್ದಾರೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರಿಗೆ ಸಹ ಮನವಿಯನ್ನು ಸಲ್ಲಿಸಲಾಗಿದೆ.
ಚುನಾವಣೆಗಳು ಮುಗಿಯುವವರೆಗೂ ಸುಮ್ಮನಿದ್ದ ಸರ್ಕಾರ ಇದೀಗ ದಿಢೀರನೆ ಕೋವಿಡ್ ನಿಯಮಗಳನ್ನು ಹೇರುವ ಮೂಲಕ ಜನ ಸಾಮಾನ್ಯರ ಬದುಕಿನೊಂದಿಗೆ ಆಟವಾಡುತ್ತಿದೆ ಎಂದು ವಿಜಯನಗರ ಜಿಲ್ಲಾ ಅತಿಥಿ ಉಪನ್ಯಾಸಕರ ಸಮಿತಿಯ ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಹೇರುವ ಮೂಲಕ ಹೋರಾಟವನ್ನು ಹತ್ತಿಕ್ಕುವ ತಂತ್ರ ಹೂಡುತ್ತಿದೆ. ಇದು ಒಡೆದು ಆಳುವ ತಂತ್ರವಾಗಿದೆ. ಇದರಿಂದ ಅತಿಥಿ ಉಪನ್ಯಾಸಕರ ಹೋರಾಟ ನಿಲ್ಲುವುದಿಲ್ಲ. ಬದಲಾಗಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಈ ಸಮಯದಲ್ಲಿ ಅತಿಥಿ ಉಪನ್ಯಾಸಕರಾದ ಅಕ್ಕಿ ಮಲ್ಲಿಕಾರ್ಜುನ, ಡಾ. ಎರಿಸ್ವಾಮಿ, ಗಿರೀಶ್ ಕುಮಾರ್ ಗೌಡ, ಸುರೇಶ್, ಡಾ.ತಿಪ್ಪೇಸ್ವಾಮಿ, ವಾಸುದೇವ್, ವಿಜಯ ಕುಮಾರ್, ಸೋಮಶೇಖರ್, ಸುಪ್ರಿಯ, ಸೌಮ್ಯ, ಡಾ.ಹನುಮಂತಮ್ಮ, ಡಾ.ಗಿರಿಜಾ, ಕಾದಂಬರಿ, ಬಸಂತಿ, ಡಾ.ನಾಗವೇಣಿ, ಶ್ವೇತ, ಸುಮಲತ, ಡಾ.ಹನುಮ0ತ ಗೌಡ, ಡಾ.ಚೌಡೇಶ್, ಮುರಳಿಧರ್, ಮಂಜು, ರಕ್ಷಿತ್, ಐಶ್ವರ್ಯ, ಪದ್ಮಾಜ ದಂಡಿ, ಸುಪ್ರಿಯ ಇನ್ನಿತರರು ಭಾಗವಹಿಸಿದ್ದರು.