ಮಸ್ಕಿ,ಜ,3 : : ಪಟ್ಟಣದ ಜೋಗಿನ ರಾಮಣ್ಣ ಪ್ರೌಢಶಾಲೆಯಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಜೋಗಿನ ರಾಮಣ್ಣ ಪ್ರೌಢಶಾಲೆಯ ಅಧ್ಯಕ್ಷರಾದ ಶಿವಕುಮಾರ ಉದ್ಘಾಟನೆ ಮಾಡಿದರು . ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಅಧಿಕಾರಿಗಳಾದ ಡಾ// ಮೌನೇಶ ಮಾತನಾಡಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗಿದೆ ಇದೀಗ 15ರಿಂದ18 ವರ್ಷದ ವಿದ್ಯಾರ್ಥಿ ಲಸಿಕೆಯನ್ನು ಪಡೆಯಬೇಕು ಮೊದಲೆರಡು ಅಲೆ ಗಳಿಗಿಂತ ಮೂರನೆಯ ಅಲೆ ಅತಿ ವೇಗವಾಗಿ ಸೋಂಕು ಹರಡುತ್ತದೆ ಕೊರನ ಮಣಿಸಲು ಲಸಿಕೆ ಅನಿವಾರ್ಯವಾಗಿದೆ.
ಕೊರೊನಾ ಸೋಂಕಿನ ಮೂರನೇ ಅಲೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಸಾಮಾಜಿಕ ಅಂತರ ಕಾಪಾಡಬೇಕು. ಜತೆಗೆ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು. ಎಲ್ಲಾ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲನೆ ಮಾಡುವ ಜತೆಗೆ, ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಈ ಮೂಲಕ ಮೂರನೇ ಅಲೆಯಿಂದ ಪಾರಾಗುವ ಪ್ರಯತ್ನ ಮಾಡೋಣ ಎಂದು ಕೋರಿದ್ದಾರೆ.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ, ಸಂಸ್ಥೆಯ ಕಾರ್ಯದರ್ಶ ವೀರೇಶ್ ಸೌದ್ರಿ, ಡಾ//ಮೋನೇಶ್ ಪುರಸಭೆಯ ನೂತನ ಸದಸ್ಯ ಸಂತೋಷ ವಿಶ್ವಕರ್ಮ, ಆರ್ ಸಿ ಎಚ್ ವಿಭಾಗದ ಮುಖ್ಯಸ್ಥರು ರಾಘವೇಂದ್ರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಗದ್ದಪ್ಪ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶಶಿರೇಖಾ, ಔಷಧಿ ವಿತರಕರಾದ ಉಮೇಶ, ಮತ್ತು ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿ ವರ್ಗದವರು ಕಾಲೇಜ್ ಉಪನ್ಯಾಸಕರು ಮತ್ತು ಪ್ರೌಢ ಶಾಲೆಯ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.