ಬಡವರಿಗೆ ಮನೆಗಳನ್ನು ನೀಡದ ಸರ್ಕಾರ ಪಾಪದ ಬಿಜೆಪಿ ಸರ್ಕಾರ

ಮರಿಯಮ್ಮನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ರವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕ ರವರು ಕಿಡಿಕಾರಿದರು. ಅವರು ಪಟ್ಟಣ ಸಮೀಪದ  ಡಣಾಪುರ ಗ್ರಾಮದಲ್ಲಿ, ಡಣಾಪುರ ಗ್ರಾಮಪಂಚಾಯತಿ ಸದಸ್ಯರ ಸಭೆಯಲ್ಲಿ, ವಿಧಾನ ಪರಿಷತ್ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯರವರ ಪರ ಮತ್ತು ಯಾಚನೆ ಮಾಡಿ  ಮಾತನಾಡಿದರು. ಕೆ.ಸಿ.ಕೊಂಡಯ್ಯರವರು ಪಕ್ಷಾತೀತ ವ್ಯಕ್ತಿಯಾಗಿದ್ದಾರೆ. ಅವರನ್ನು ಚುನಾಯಿತ ಸದಸ್ಯರಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆಯ  ಸದಸ್ಯರು ಕೊಂಡಯ್ಯರವರಿಗೆ ತಮ್ಮ ಮತವನ್ನು ಹಾಕಿ ಜಯಶೀಲರಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸರ್ಕಾರ ಬಡವರ ಮನೆಗಳನ್ನು ಕಿತ್ತುಕೊಂಡಿದೆ. ಕಾಂಗ್ರೆಸ್‌ ಸರ್ಕಾರ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ 12640 ಮನೆಗಳನ್ನು ಕೊಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಎರಡೂವರೆ ವರ್ಷಗಳು ಆದರೂ ಬಡವರಿಗೆ ಒಂದು ಮನೆಯನ್ನು ಕೂಡ ನೀಡಿಲ್ಲ. ಆನಂದ ಸಿಂಗ್ ಸಚಿವರು ಆಗಲು ಕಾಂಗ್ರೆಸ್ ಪಕ್ಷವೇ ಕಾರಣ. ಬಿಜೆಪಿ ಯವರು ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ. 700 ರೈತರ ಜೀವವನ್ನು ಬಲಿ ತೆಗೆದುಕೊಂಡ ಬಿಜೆಪಿ ಸರ್ಕಾರ. ಬಿಜೆಪಿ ಸರ್ಕಾರವು ಪಾಪದ ಸರ್ಕಾರವಾಗಿದೆ.ಜನತಾ ಕೋರ್ಟಿನಲ್ಲಿ ಸೋತ ಸರ್ಕಾರ, ಕಾಂಗ್ರೆಸ್, ಜೆಡಿಎಸ್ ಪಕ್ಷದ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಅನೈತಿಕವಾಗಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಪಾಪದ ಸರ್ಕಾರ.ಅಧಿಕಾರ ಹಿಡಿದು ಎರಡೂವರೆ ವರ್ಷ ಆದರೂ, ಇದುವರೆಗೂ ನಿಮ್ಮ ಅಭಿವೃದ್ಧಿ ಸಾಧನೆ ಏನು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷವು ಅಧಿಕಾರ ವಿಕೇಂದ್ರೀಕರಣವನ್ನು ಜಾರಿಗೆ ತಂದು,ಸಮಾಜದ ಎಲ್ಲಾ ವರ್ಗದ ಜನರಿಗೆ ಅಧಿಕಾರ ಹಿಡಿಯಲು ಅವಕಾಶ ಕಲ್ಪಿಸಿದೆ. ಬಿಜೆಪಿ ಸರ್ಕಾರ ಬಡವರ ಜೀವನವನ್ನು ಬೀದಿಗೆ ಬರುವ ಹಾಗೆ ಮಾಡಿದೆ ಎಂದರು.               

                  ಈ ಸಂಧರ್ಭದಲ್ಲಿ ಕೆಪಿಸಿಸಿ.ಸದಸ್ಯ ಕುರಿ ಶಿವಮೂರ್ತಿ, ಮಾಜಿ  ಜಿಲ್ಲಾ ಪಂ.ಸದಸ್ಯ ಗೋವಿಂದರ ಪರಶುರಾಮ, ಗ್ರಾ.ಪಂ.ಮಾಜಿ ಅದ್ಯಕ್ಷ ಸಿಎ.ಗಾಳೆಪ್ಪ, ಸತ್ಯನಾರಾಯಣ, ಬುಡೇನ್ ಸಾಬ್,ಹೆಗ್ಡಾಳ ರಾಮಣ್ಣ, ವಲಿಸಾಬ್, ಕಡ್ಡಿ ಹುಲುಗಪ್ಪ, ಅಯ್ಯನಹಳ್ಳಿ ವೆಂಕಟೇಶ, ಗ್ರಾ.ಪಂ.ಸದಸ್ಯ ನಾಗರಾಜ, ಮಂಜುನಾಥ,  ಗ್ರಾ.ಪಂ.ಸದಸ್ಯರಾದ ರವಿರಾಜ,ಪಕ್ಕೀರಪ್ಪ, ಮಲ್ಲೇಶ್, ಮಂಜುನಾಥ, ಪದ್ಮಾವತಿ ವೆಂಕಟೇಶ್, ರಾಜ, ನಾಗರತ್ನಮ್ಮ, ದುರುಗಮ್ಮ, ಮುಖಂಡರಾದ ಕೆ.ಅಂಜಿನಪ್ಪ, ಗುಡದಪ್ಪ, ಬಸವರಾಜ, ಕೆ.ಸೋಮಣ್ಣ, ರಾಘವೇಂದ್ರ,ಹೊಳಗುಂದಿ ರಾಜಭಕ್ಷಿ, ಕಡ್ತರಖಾದರಬಾಷ, ತಳವಾರ್ ಬಸವರಾಜ, ರೋಗಣಿ ಮಂಜುನಾಥ, ಡಿ.ಎಸ್.ಎಸ್.ಮಂಜುನಾಥ,ಸೋಮಲಿಂಗಪ್ಪ ಎಸ್.ಮಹಮ್ಮದ್, ಈ.ಮಂಜುನಾಥ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,  ಎ.ರಹಮಾನ್‌, ಬೆಣಕಲ್ ಬಾಷ ಇತರರಿದ್ದರು. 

Leave a Comment

Your email address will not be published. Required fields are marked *

Translate »
Scroll to Top