ಶರಣರ ಆದರ್ಶವನ್ನು ನಿತ್ಯ ಜೀವನದಲ್ಲಿ ಪಾಲಿಸಿ: ರುದ್ರೇಶ್ ಮೂರ್ತಿ

ದೇವನಹಳ್ಳಿ:ಶರಣರ ಸವೆಸಿದ ಜೀವನ ಮಾರ್ಗ ದಿಂದ ಸುಲಭಮುಕ್ತಿ ಸಾಧ್ಯ. ಶರಣರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು
ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮೇಲೂರು ಮುಖ್ಯ ರಸ್ತೆಯ ಅರಿವಿನ ಮನೆ ಸಭಾಂಗಣದಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಠಿ ಅಕ್ಕನಬಳಗ ಸೇವಾ ಟ್ರಸ್ಟ್, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಅರಿವಿನಮನೆ ವತಿಯಿಂದ ತಿಂಗಳ ಬೆಳಕು ಮತ್ತು ಮಾತೆ ಕಾಮಾಕ್ಷಮ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ದಿಸೆಯಿಂದಲೇ ವಚನಸಾಹಿತ್ಯ, ದಾಸಸಾಹಿತ್ಯದ ಅಧ್ಯಯನದ ಅಗತ್ಯವಿದೆ ಎಂದರು.ಶ್ರೀ ವೀರೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ಅನಿಲ್ ಕುಮಾರ್ ಮಾತನಾಡಿ, ವ್ಯಕ್ತಿಯ ಜೀವನ ಸಾರ್ಥಕ ವಾಗಬೇಕಾದರೆ ನಾವು ಬದುಕುವ ಮಾರ್ಗವು ಧರ್ಮಪುರಿ ಮತ್ತು ಅಧ್ಯಾತ್ಮಿಕ, ಮೌಲ್ಯ ಮುಕ್ತವಾಗಿರಬೇಕು. ಮಾತೆ ಕಾಮಾಕ್ಷಮ್ಮ ಅವರು ಶರಣಜೀವನವು ಎಲ್ಲರಿಗೂ ಅನುಕರಣೀಯ ಎಂದರು.

ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿ ಅಕ್ಕನಬಳಗ ಸೇವಾ ಟ್ರಸ್ಟ್ ಕಾರ್ಯದರ್ಶಿ ಮ.ಸುರೇಶ್ ಬಾಬು, ಟಿ.ಚಂದ್ರಪ್ಪ, ಕೃಷ್ಣಪ್ಪ ದಾಸ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ, ಸ್ವರ್ಣಗೌರಿ ಮಹದೇವ್, ಅಂಬಾಭವಾನಿ, ಮಹದೇವಮ್ಮ, ವಿಮಲಾಗೌಡ, ರಾಧಾಮನೋಹರ್, ಮೀನಾ, ಸುಗಟೂರು ಕಲಾ ಬಳಗದ ಸದಸ್ಯರು, ಪಾಲ್ಗೊಂಡಿದ್ದರು.ವಚನಗಾಯನ ನಡೆಯಿತು.

Leave a Comment

Your email address will not be published. Required fields are marked *

Translate »
Scroll to Top