ಶಿಡ್ಲಘಟ್ಟ : ಕಾನೂನಿನ ಅರಿವಿರೋ ಪೊಲೀಸ್ ಆತ.ಖಾಕಿ ತೊಟ್ಟು ಕಾನೂನನ್ನು ರಕ್ಷಣೆ ಮಾಡಬೇಕಾಗಿದ್ದವರು. ಆದರೆ ಆ ಖಾಕಿಯೊಳಗಿದ್ದ ಕಾಮ ಮಾತ್ರ ಆ ಪೊಲೀಸ್ನಿಂದ ಮಾಡಬಾರದ ಕೆಲಸ ಮಾಡಿಸಿಬಿಟ್ಟಿತ್ತು.ಮಾಡಿದ ತಪ್ಪಿಗೆ ಖಾಕಿ ಕಳಚಿಟ್ಟು ಕಂಬಿ ಹಿಂದೆ ಸೇರಿದ್ದಾರೆ ಆ ಪೊಲೀಸ್ ಕಾನ್ಸ್ಟೇಬಲ್.ಚಿಕ್ಕಬಳ್ಳಾಪುರ ನಗರದಲ್ಲಿ ಸಂಚಾರಿ ಪೊಲೀಸ್ ಕೆಲಸ ನಿರ್ವಹಿಸಿಕೊಳ್ಳುತ್ತಿದ್ದ ಅನಂತಕುಮಾರ್. ಈತ ಖಾಕಿ ತೊಡುತ್ತಿದ್ದ ಈ ಪೊಲೀಸಪ್ಪ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಂಡು ಇದ್ದಿದ್ದರೆ ಸಾಕಾಗುತ್ತಿತ್ತು. ಆದರೆ ಮಾಡಿದ್ದೇ ಬೇರೆ. ಶಿಡ್ಲಘಟ್ಟ ನಗರದಲ್ಲಿ ವಾಸವಾಗಿರುವ ವೆಂಕಟೇಶ್ ಪತ್ನಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ರಂತೆ.ತನ್ನ ಮನೆಯಲ್ಲಿ 4 ವರ್ಷಗಳ ಕಾಲ ಕಾನ್ಸ್ಟೇಬಲ್ ಆತನ ಹೆಂಡ್ತಿಯನ್ನ ಇಟ್ಕೊಂಡಿದ್ರಂತೆ.ಆದ್ರೆ ಈ ದಿನ 21ನೇ ತಾರೀಖು ಇಬ್ಬರೂ ಜಗಳವಾಡಿ ಆ ಮಹಿಳೆ ರಾಜೇಶ್ವರಿಯನ್ನು ಕೊಲೆ ಮಾಡಿರುವುದಾಗಿ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಡ್ಲಘಟ್ಟ ನಗರದ ಮಾರಮ್ಮ ವೃತ್ತದಲ್ಲಿ ವಾಸವಿದ್ದ ರಾಜೇಶ್ವರಿ ಗಂಡ ವೆಂಕಟೇಶ್ ಮತ್ತು ಇಬ್ಬರು ಹೆಣ್ಣು ಮಕ್ಕಳು ಸುಖ ಸಂಸಾರ ನಡೆಸುತ್ತಿದ್ದು ಕಾರ್ಯಕ್ರಮ ಒಂದಕ್ಕೆರಾಜೇಶ್ವರಿ ಪತಿ ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡಿದ ನಾನು ಮತ್ತು ನನ್ನ ಹೆಂಡತಿ ರಾಜೇಶ್ವರಿ ಭೋವಿ ಜನಾಂಗಕ್ಕೆ ಸೇರಿದ್ದು,ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ಈಗಿರುವಲ್ಲಿ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅನಂತ ಕುಮಾರ್ ರವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣದ ಆಮಿಷ ತೋರಿಸಿ ಹಾಗೂ ಜೀವ ಬೆದರಿಕೆ ಹಾಕಿ ನನ್ನ ಹೆಂಡತಿಯಾದ ರಾಜೇಶ್ವರಿಯವರ ಜೊತೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿರುತ್ತಾರೆ.ಸುಮಾರು ಒಂದೂವರೆ ವರ್ಷಗಳಿಂದ ಇಬ್ಬರು ಜೊತೆಯಲ್ಲಿ ಅಂದರೆ ಶಿಡ್ಲಘಟ್ಟ ನಗರದ ಎಂ.ಆರ್.ಎಸ್ ಸರ್ಕಲ್, ಮಾರಮ್ಮನ ದೇವಸ್ಥಾನದ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ.ಅನಂತ ಕುಮಾರ್ ರವರಿಂದ ನನಗೆ ಹಲವು ಬಾರಿ ಜೀವ ಬೆದರಿಕೆ ಹಾಗೂ ಹಲವು ಬಾರಿ ಹಲ್ಲೆ ಕೂಡ ನಡೆಸಿರುತ್ತಾರೆ.ಇವರ ಕಿರುಕುಳ ತಡೆಯಲಾಗದೆ ಹಾಗೂ ನನ್ನ ಮಕ್ಕಳನ್ನು ನೋಡದೆ ಇರಲಾಗದೆ ಇದೇ ಶಿಡ್ಲಘಟ್ಟ ನಗರದ ಮಾರುತಿ ನಗರದಲ್ಲಿ ನಾನು ಬೇರೆ ಮನೆಯಲ್ಲಿ ವಾಸವಿರುತ್ತೇನೆ ಎಂದರು.
ದಿನಾಂಕ: 21/11/2021 ರಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ರಾಜೇಶ್ವರಿ ಹಾಗೂ ಅನಂತ ಕುಮಾರ್ ಇಬ್ಬರು ಪರಸ್ಪರ ಕಿತ್ತಾಡಿಕೊಂಡು ಗಲಾಟೆಯು ತೀವ್ರ ಸ್ವರೂಪಕ್ಕೆ ತಿರುಗಿದ ನಂತರ ಮದ್ಯಪಾನ ಮಾಡಿದ್ದ ಅನಂತ ಕುಮಾರ್ ಮದ್ಯದ ಅಮಲಿನಲ್ಲಿ ಮೇಲಿನ ಸಹಾಯದಿಂದ ಕಿಟಕಿಗೆ ನೇಣು ಬಿಗಿದು ಕೂಲೆ ಗೈದಿರುತ್ತಾರುತ್ತಾರೆ. ಆ ಸಮಯದಲ್ಲಿ ಮೃತ ರಾಜೇಶ್ವರಿಯ ತಮ್ಮನಾದ ಸುರೇಶ್ ರವರು ಮನೆಗೆ ಹೋಗಿರುತ್ತಾರೆ. ಆ ಸಮಯದಲ್ಲಿ ಮನೆಯ ಒಳಭಾಗದಲ್ಲಿ ಬಾಗಿಲು ಲಾಕ್ ಮಾಡಲಾಗಿದ್ದು, ಸುರೇಶ್ ರವರು ಜೋರಾಗಿ ಕಾಲಿನಿಂದ ಬಾಗಿಲನ್ನು ಒದ್ದು ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ರಾಜೇಶ್ವರಿಯವರು ಹಾಗು ಕೈಯಲ್ಲಿ ವೇಲನ್ನು ಹಿಡಿದ ಸ್ಥಿತಿಯಲ್ಲಿ ಅನಂತ ಕುಮಾರ್ ಕಂಡು ಬರುತ್ತಾರೆ ಅನಂತ ಕುಮಾರ್ ರವರೇ ಕೊಲೆಗೈದು ಪರಾರಿಯಾಗಿರುತ್ತಾರೆ ಎಂದು ಆರೋಪಿಸಿದ್ದಾರೆ.
ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆಸಿ ನನಗೂ ಹಾಗೂ ನನ್ನ ಮಕ್ಕಳಿಗೂ ನ್ಯಾಯಕೊಡಿಸಿ ರಕ್ಷಣೆ ಕೊಡಿಸಬೇಕಾಗಿ ಕೋರಿದ್ದರ ಮೇರೆಗೆ ಠಾಣಾ ಮೊ.ಸಂ: 143/2021 ಕಲಂ: 302 ಐಪಿಸಿ ರೀತ್ಯ ಪ್ರಕರಣ ದಾಖಲಿಸಲಾಗಿದೆ.
ವರದಿ ಮಾನಸ್