ದುರಗಪ್ಪ ಚೂರಿ ಇವರ ಮನೆಯಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶುಭ ಆರೈಸಿದ ಹೃದಯವಂತ ಮಾಜಿ ಶಾಸಕ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ವಾರ್ಡ ನಂಬರ ೨೦ರ ಡಂಬರ ಓಣಿಯ ದುರಗಪ್ಪ ಸತ್ಯಪ್ಪ ಚೂರಿ ಇವರ ಮನೆಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ ೫೩೪ನೇ ಜಯಂತಿ ಪೂಜೆ ಕಾರ್ಯಕ್ರಮ ನೆರೆವರೆಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲೆ ಬಿಜೆಪಿ ಪಕ್ಷದ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ, ಕುರಿ ಮತ್ತು ಉಣ್ಣೆ ನಿಗಮದ ರಾಜ್ಯಾಧ್ಯಕ್ಷರಾದ ಶರಣು ತಳ್ಳಿಕೇರಿ, ಕುಷ್ಟಗಿ ತಾಲೂಕು ಹಾಲುಮತ ಸಮಾಜದ ಅಧ್ಯಕ್ಷರಾದ ಮಲ್ಲಣ್ಣ ಪಲ್ಲೇದ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎ.ಪಿ.ಎಂ.ಸಿ ಕುಷ್ಟಗಿ ಉಪಾಧ್ಯಕ್ಷೆ ಶರಣಮ್ಮ ಚೂರಿ ಭಕ್ತ ಶ್ರೇಷ್ಠ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಭ ಆರೈಸಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಂತರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ದಾಸ ಶ್ರೇಷ್ಠರಲ್ಲಿ ಕನಕದಾಸರು ಮಾಹಾನ್ ಶ್ರೇಷ್ಠರು ಮನುಕುಲದ ಒಳಿತಿಗಾಗಿ ಜಾತಿ ಭೇದವನ್ನು ಮರೆತು ಜಾತೀಯತೆಯನ್ನು ಹೋಗಲಾಡಿಸಿದವರು. ಈ ಮನುಜ ಕುಲವನ್ನ ಒಂದು ಮಾಡಿ ಈ ನಮ್ಮ ಮನುಷ್ಯನ ಕುಲ ಎಂತದ್ದು ಇದೆ ಎನ್ನುವುದನ್ನು ತೋರಿಸಿಕೊಟ್ಟರು ಕನಕದಾಸರು ಅವರ ಭಕ್ತಿ ಈ ಮಾನವನ ಕುಲಕ್ಕೆ ಒಳಿತಾಗಿದ್ದು ನಾವುಗಳು ಎಲ್ಲರು ತತ್ವಗಳನ್ನು ಅಳವಡಿಸಿಕೊಂಡು ಅವರ ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು‌ ಹೇಳಿದರು.

ತದ ನಂತರ ಹಾಲುಮತ‌ ಸಮಾಜದ ಅಧ್ಯಕ್ಷ ‌ಮಲ್ಲಣ್ಣ ಪಲ್ಲೇದ್ ಮಾತನಾಡಿ ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಅಂದಿನ ಕಾಲಘಟ್ಟದಲ್ಲಿ ಶ್ರೀ ಕೃಷ್ಣನ ದರ್ಶನ ಮಾಡಲು ಬ್ರಾಹ್ಮಣರು ಯಾರನ್ನು ಬಿಡುತ್ತಿರಲಿಲ್ಲ ಆಗ ಕನಕದಾಸರು ಉಡುಪಿ ಕಡೆ ಸಂಚಾರವನ್ನು ಮಾಡುವ ಸಮಯದಲ್ಲಿ ಶ್ರೀಕೃಷ್ಣನ ದರ್ಶನ ಮಾಡಬೇಕೆಂದುಕೊಂಡರು ಆ ಸಮಯದಲ್ಲಿ ಕನಕದಾಸರು ಶ್ರೀಕೃಷ್ಣನ ದರ್ಶನ ಮಾಡಲು ಹೊರಟಾಗ ಅಲ್ಲಿನ ಬ್ರಾಹ್ಮಣರು ಶ್ರೀಕೃಷ್ಣನನ್ನು ದರ್ಶನ ಮಾಡಲು ಬಿಡಲಿಲ್ಲ ಭಕ್ತಕನಕದಾಸರು ಭಕ್ತಿಯಿಂದ ತಮ್ಮತ್ತ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಮಹಾತ್ಮ ಶ್ರೀ ಕನಕದಾಸರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಲ್ಲೇಶ ತಾಳದ್, ಜೆ.ಜೆ.ಆಚಾರ್, ಬಸವರಾಜ ಬುಡಕುಂಟಿ, ಮುಖಂಡರಾದ ಶರಣಪ್ಪ ಚೂರಿ, ಶರಣಪ್ಪ ಕತ್ತಿ, ಕೊಳ್ಳಪ್ಪ ಬೂದ್, ಲಕ್ಷ್ಮಣ ಕಟ್ಟಿಹೊಲ, ತೊಂಡೆಪ್ಪ ಚೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top