ದೇವನಹಳ್ಳಿ:
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಂಘದಿಂದಾಗಲಿ ಮತ್ತು ಉಳಿದಂತೆ ಆಸ್ಪತ್ರೆ ಸೌಲಭ್ಯ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಹಾಗೂ ಒಕ್ಕಲಿಗರ ಸಂಘದಿಂದ ದೊರೆಯುವ ಇನ್ನು ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಡಿಸೆಂಬರ್ 12 ರಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ತಮ್ಮ ಅಮೂಲ್ಯವಾದ ಮತವನ್ನು ಡಾ.ವಿನೋದ್ ಕುಮಾರ್ ಗೌಡ ಆದ ನನಗೆ ನೀಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿನೋದ್ ಕುಮಾರ್ ಗೌಡ ಮನವಿ ಮಾಡಿದರು.
ಅವರು ದೇವನಹಳ್ಳಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಹುಟ್ಟು ಹೋರಾಟಗಾರನಾಗಿದ್ದು ಕನ್ನಡಪರ ರೈತಪರ ಸರೋಜಿನಿ ಮಹಿಶಿ ವರದಿ ಜಾರಿಯಾಗಲು ಹಾಗೂ ಜಿಲ್ಲಾ ಕೇಂದ್ರ, ಭವನ ನಿರ್ಮಾಣಕ್ಕೆ ಹೀಗೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ಯಶಸ್ವಿಯಾಗಿದ್ದೇವೆ. ಆದ್ದರಿಂದ ನಮ್ಮ ರಾಜ್ಯ ಒಕ್ಕಲಿಗರ ಸಂಘದಲ್ಲೂ ದೌರ್ಜನ್ಯ, ಭ್ರಷ್ಟಾಚಾರ, ಹೊಸಹೊಸ ಯೋಜನೆ ಅನುಷ್ಟಾನ ಜಾರಿಗೆ ತರಲು ವಿಫಲರಾಗಿರುವುದು ಕಿಮ್ಸ್ ಆಸ್ಪತ್ರೆಗೆ ಗ್ರಾಮೀಣ ಪ್ರದೇಶದ ಹೊರರೋಗಿಗಳಿಗೆ ಯಾವುದೇ ಅನುಕೂಲ ಮಾಡುತ್ತಿಲ್ಲಾ, ಕಾರಣ ಚುನಾವಣೆ ಸಂದರ್ಭದಲ್ಲಿ ಹಣದ ಹೊಳೆ ಹರಿಸಿ ಎಲ್ಲರನ್ನು ಖರೀದಿ ಮಾಡಿರುವ ಅಹಂ ಇರುತ್ತದೆ ಆದ್ದರಿಂದ ಬಡವರಿಗೆ ದೊರೆಯಬೇಕಾದ ಸೌಲಭ್ಯ ವಂಚಿತರಾದರಾಗಿತ್ತಿದ್ದಾರೆ ಇದಕ್ಕೆಲ್ಲಾ ಸರಿಯಾದ ದಾರಿ ಎಂದರೆ ಸೇವಾ ಮನೋಬಾವನೆಯುಳ್ಳ ಹೊಸ ವ್ಯಕ್ತಿಯ ಆಯ್ಕೆ. ಮತದಾರರು ನನಗೆ ಒಂದು ಅವಕಾಶ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾಧ್ಯಕ್ಷರಾದ ಮುನಿರಾಜು, ಮಂಜುನಾಥ್, ನಾಗರಾಜ್, ಬಾಬು, ಸುರೇಶ್, ಶಿವಕುಮಾರ್ ಹಾಗೂ ಅನೇಕ ಪದಾಧಿಕಾರಿಗಳು ಇದ್ದರು.