ಮಸ್ಕಿಯಲ್ಲಿ 3 ಕೀ.ಮೀ ಮ್ಯಾರಥಾನ್ ಓಟಕ್ಕೆ ಚಾಲನೆ

ಮಸ್ಕಿ : ಅಭಿನಂದನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ರವಿವಾರ ಬೆಳಿಗ್ಗೆ ನಗರದಲ್ಲಿ ಆಯೋಜಿಸಿದ ಮ್ಯಾರಾಥಾನ್ ಓಟಕ್ಕೆ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಮಾನವನ ಶರೀರ ಆರೋಗ್ಯವಾಗಿರಬೇಕಿದ್ದಲ್ಲಿ ವ್ಯಾಯಾಮ ಅಗತ್ಯವಾಗಿದೆ. ಇಂದು ಭಾರತವನ್ನು ಯೋಗದಲ್ಲಿ ವಿಶ್ವದಲ್ಲಿ ಗುರುತಿಸಿದೆ. ಇಂತಹ ಓಟಗಳ ಮೂಲಕ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆಯುವಜನರು ಇಂದು ಕೆಟ್ಟ ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಇಂತಹ ಓಟಗಳು ಪ್ರಯೋಜನಕಾರಿಯಾಗಿವೆ. ಯುವಜನರು ಇಂದು ಭಾರತವನ್ನು ಮುನ್ನಡೆಸಬೇಕಾಗಿದ್ದು ಪ್ರಧಾನಿಯವರ ಆಶಯವನ್ನು ಓಟದ ಮೂಲಕ ಸಫಲಗೊಳಿಸುವುದರೊಂದಿಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳೋಣ ಎಂದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಿಂದ ಆರಂಭಗೊಂಡ ಓಟ ಅಂಬೇಡ್ಕರ್ ವೃತ್ತ ಅಶೋಕ ವೃತ್ತ ದೈವದ ಕಟ್ಟೆ ಕನಕ ವೃತ್ತ ಮುಖ್ಯ ರಸ್ತೆಯ ಮುಖಾಂತರ ಮಾರ್ಗವಾಗಿ ಗಚ್ಚಿನ ಮಠದ ಬಳಿ ಕೊನೆಗೊಂಡಿತು. ಸುಮಾರು 200 ಪುರುಷ ಮತ್ತು‌ವಿದ್ಯಾರ್ಥಿಗಳು,‌ ನೌಕರರು, ಕ್ರೀಡಾಪಟುಗಳು, ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಪುರಷರಿಗೆ ಆಯೋಜಿಸಿದ 3 ಕಿ.ಮೀ ಓಟದ ಸ್ಪರ್ಧೆಯಲ್ಲಿ ಶಿವರಾಜ್ ತಂದೆ ಅಂಬರೀಶ್ ಬಳಗಾನೂರು ಪ್ರಥಮ, ತಿಮ್ಮಣ್ಣ ಮಲದಗುಡ್ಡ ದ್ವಿತೀಯ ಸ್ಥಾನ, ಹಾಗೂ ವಿರುಪಾಕ್ಷಿ ಅಮರಾಪುರ ತೃತೀಯ ಸ್ಥಾನ ಪಡೆದರು.

ಪುರುಷ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದವರಿಗೆ 5001ಸಾವಿರ ರೂ, ಎರಡನೇ ಸ್ಥಾನ‌ ಪಡೆದವರಿಗೆ 3001ಸಾವಿರ ರೂ. ಹಾಗೂ ಮೂರನೇ ಸ್ಥಾನ ಗಳಿಸಿದವರಿಗೆ 1100 ನೂರ ರೂ. ನಗದು ಹಣ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ವರ ರುದ್ರಮುನಿ ಶಿವಾಚಾರ್ಯರು ಗಚ್ಚಿನಮಠ ಮಸ್ಕಿ, ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರುಮಸ್ಕಿ, ಡಾ” ಮೌನೇಶ್, ಡಾ” ಮಲ್ಲಿಕಾರ್ಜುನ್. ಡಾಕ್ಟರ್ ಶಿವಶರಣಪ್ಪ ಇತ್ಲಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಅಭಿನಂದನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರ ಗುಂದಿ, ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ಅಧ್ಯಕ್ಷರಾದ ಪ್ರಸನ್ ಪಾಟೀಲ್, ಶಿವಪ್ರಸಾದ್ ಕ್ಯಾತ ನಟ್ಟಿ, ಸಿಪಿಐ ಸಂಜು ಶಿವಾನಂದ್ ಬಳಿಗಾರ್, ಪಿಎಸ್ಐ ಸಿದ್ದರಾಮ್ ಬಿದರಾಣಿ, ಎ ಎಸ್ ಐ ಛತ್ರಪ್ಪ ಹಾಗೂ ಸಿಬ್ಬಂದಿ ವರ್ಗದವರು ಮತ್ತು ದೊಡ್ಡ ಬಸಯ್ಯ ಗಣಾಚಾರಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಹಾಗೂ , ಮಸ್ಕಿ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು, ಸಾರ್ವಜನಿಕರು, ಅಧಿಕಾರಿಗಳು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

Translate »
Scroll to Top