ಜಿಲ್ಲಾ ಕಸಾಪ ಚುನಾವಣೆಗೆ ಈ ಬಾರಿ ಬದಲಾವಣೆ ಅಗತ್ಯ : ಕೆ.ಮಹಾಲಿಂಗಯ್ಯ

ದೇವನಹಳ್ಳಿ :ಕನ್ನಡ ಸಾಹಿತ್ಯಪರಿಷತ್ತು ಚುನಾವಣೆ ಈ ಬಾರಿ ಅಗತ್ಯ ಬದಲಾವಣೆ ತರಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ
ಕೆ.ಮಹಾಲಿಂಗಯ್ಯ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆ
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ, ಭಾಷೆ, ನಾಡು-ನುಡಿಯ ಏಳಿಗೆಗಾಗಿ ಸಾಹಿತ್ಯಾತ್ಮಕ ಸಂಘಟನೆ ಇಂದು ಅನಿವಾರ್ಯವಾಗಿದೆ. ಅದಕ್ಕಾಗಿ ಈ ಬಾರಿಯಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು ಎಂದು ಮತದಾರರನ್ನು ಕೋರಿದರು.ಅಭ್ಯರ್ಥಿಯನ್ನು ಆಯ್ಕೆ ಮಾಡಿ: ಪರಿಷತ್ತಿನ ಕಾರ್ಯಕ್ರಮಗಳು ಕೇವಲ ಗ್ರಾಮ ಪಟ್ಟಣ ಹೋಬಳಿ ಮಟ್ಟಕ್ಕೆ ಮೀಸಲಾಗದೆ ಜಿಲ್ಲೆಯಪ್ರತಿ ಭಾಗಕ್ಕೂ ವಿಸ್ತರಣೆಯಾಗಬೇಕಿದೆ.ಕಾರ್ಯಕ್ರಮಗಳನ್ನು ಆಯೋಜಿಸುವಾಗ ಎಲ್ಲ ಕನ್ನಡಿಗರ ನಿರ್ಧಾರ ಬೇಕು. ಅರ್ಥಪೂರ್ಣವಾಗಿ
ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣವಾಗಬೇಕಿದೆ .ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿಯನ್ನು ಆಯ್ಕೆಮಾಡುವುದರ ಮೂಲಕ ಬದಲಾವಣೆ ಕಾಣಬೇಕು ಎಂದು ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿ. ಬಸವರಾಜು ಮಾತನಾಡಿ, ಎರಡು ಮೂರು ಅವಧಿಯಿಂದ ಕನ್ನಡದ ಕಾರ್ಯಕ್ರಮಗಳು ಏಕಮುಖ ನಿರ್ಧಾರದ ಮೂಲಕ ನಡೆಯುತ್ತಿದ್ದು ಕೇವಲ ಸೀಮಿತ ವ್ಯಕ್ತಿಗಳಿಗೆ ಮೀಸಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡದ ಕಾರ್ಯಕ್ರಮಗಳು ಔನತ್ಯ ಸಾಧಿಸಬೇಕು. ಅರ್ಥಪೂರ್ಣವಾಗಿನಡೆಯ ಬೇಕಾಗಿರುವುದರಿಂದ ಬದಲಾವಣೆ ನಿರೀಕ್ಷಿತ ಮತ್ತು ಅನಿವಾರ್ಯ ಎಂದರು.ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ
ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೇತ್ರಾವತಿ, ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಭವ್ಯ, ನಿವೃತ್ತ ಉಪನಿರ್ದೇಶಕ
ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.ಅಭ್ಯರ್ಥಿ ಕೆ. ಮಹಾಲಿಂಗಯ್ಯ ಮತಯಾಚನೆಗೂ ಮುನ್ನ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟ್ಟಣದಲ್ಲಿ ಮನೆ ಮನೆ ಪ್ರಚಾರ ಕೈಗೊಂಡರು.

Leave a Comment

Your email address will not be published. Required fields are marked *

Translate »
Scroll to Top