ಅಂಗಡಿಯಿಂದ ಅಂಡಗಿಗೆ ಅಧಿಕಾರ ಹಸ್ತಾಂತರ ಬಹುತೇಕ ಖಚಿತ—ಹನುಮಂತಪ್ಪ ಅಂಡಗಿ

ಕುಷ್ಟಗಿ : ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶರಣೇಗೌಡರು ಸಾಹಿತಿಗಳಲ್ಲˌ.ವೀರಣ್ಣ ನಿಂಗೋಜಿಯವರು ಈಗಾಗಲೇ ಒಂದು ಸಾರಿ ಅಧ್ಶಕ್ಷರಾಗಿದ್ದಾರೆ.ಹೀಗಾಗಿ ನನಗೆ ಜಿಲ್ಲೆಯಾದ್ಶಂತ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಶಕ್ತವಾಗುತ್ತಿದೆ ಎಂದು ಸರಕಾರಿ ಬಾಲಕಿಯರ ಪ್ರೌಢ ಶಾಲೆ ಕುಷ್ಟಗಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುಣಾವಣೆ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಹೇಳಿದರು.

ನಂತರ ಮಾತನಾಡಿದ ಅವರು ಹೀಗಾಗಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಅಧ್ಶಕ್ಷರಾದ ರಾಜಶೇಖರ ಅಂಗಡಿ ಅವರಿಂದ ಹನುಮಂತಪ್ಪ ಅಂಡಗಿ ಚಿಲವಾಡಗಿಗೆ ಅಧಿಕಾರ ಹಸ್ತಾಂತರವು ಬಹುತೇಕ ಖಚಿತವಾಗಿದೆ.ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನವು ಸಾಹಿತಿಗಳಿಗೆ ಮೀಸಲಿರಬೇಕು.ನಾನು ಸಾಹಿತಿಯಾಗಿದ್ದೇನೆ. ನಾನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಶ ಪರಿಷತ್ತಿನ ಅಧ್ಶಕ್ಷನಾಗಿ ಕೊಪ್ಪಳದಲ್ಲಿ ರಾಜ್ಶಮಟ್ಟದ 14 ನೇ ಹಾಗೂ ರಾಜ್ಶಮಟ್ಟದ 17 ನೇ ಚುಟುಕು ಸಾಹಿತ್ಶ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದೇನೆ.ಕೊಪ್ಪಳ ಜಿಲ್ಲಾಮಟ್ಟದ 10 ಚುಟುಕು ಸಾಹಿತ್ಶ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದೇನೆ.ಇಡೀ ಕರ್ನಾಟಕದಲ್ಲಿ ಇಷ್ಟು ಸಮ್ಮೇಳನಗಳನ್ನು ಹಮ್ಮಿಕೊಂಡ ಏಕೈಕ ಸಾಹಿತಿಯಾಗಿದ್ದೇನೆ.35 ಕೃತಿಗಳನ್ನು ಹೊರತಂದಿದ್ದೇನೆ.ಹೀಗಾಗಿ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಶ ಪರಿಷತ್ತಿನ ಆಜೀವ ಸದಸ್ಶರು ನನಗೆ ಮತಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಬೇಕು.ರಾಜ್ಶ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಹೇಶ ಜೋಶಿಯವರಿಗೆ ಮತನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಶ ಪರಿಷತ್ತಿನ ಆಜೀವ ಸದಸ್ಶರಾದ ಡಾ.ಶರಣಪ್ಪ ನಿಡಶೇಷಿ ; ನಾಗಪ್ಪ ಬಿಳಿಯಪ್ಪನವರ ; ಮಹಾಂತಪ್ಪ ಅರಳಿ ; ಸುಭಾಸ ನಿಡಸನೂರು ; ನಾಗರಾಜ ಎಲಿಗಾರ ; ಆರ್.ಎಸ್.ಅಂಗಡಿ ; ಮಾರುತಿ ವಡ್ರಟ್ಟಿ; ನಾಗರತ್ನ ಕುಲಕರ್ಣಿ ; ಎ.ಎಂ.ಜರಕುಂಟಿ ; ಪೀರಾಂಬಿ ನದಾಪ್ ; ಚೈತ್ರಾ ಹಿರೇಮಠ; ಬಿ.ಕೆ.ವಾರದ ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top