ಹೊಸಪೇಟೆ : ಕೇದಾರನಾಥದಲ್ಲಿ ಪ್ರಧಾನಿ ಮೋದಿ ಅವರಿಂದ ಇಂದು ಆದಿಗುರು ಶಂಕರಾಚಾರ್ಯರ ಪ್ರತಿಮೆ ಹಾಗೂ ಸಮಾಧಿ ಲೋಕಾರ್ಪಣೆ ಮಾಡಲಾಯಿತು.
ಈ ನಿಮಿತ್ತವಾಗಿ ವಿಜಯನಗರ ಜಿಲ್ಲೆಯಲ್ಲಿನ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಶ್ರೀಗಳು ಹಾಗೂ ಹಂಪಸಾಗರದ ರುದ್ರಮೂರ್ತಿ ಶಿವಲಿಂಗ ಆಚಾರ್ಯರು ಬಳ್ಳಾರಿಯ ಸಂಸದ ವೈ ದೇವೇಂದ್ರಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ರು.
ಇದೇ ವೇಳೆ ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಶ್ರೀಗಳು ಆಶೀರ್ವಚನ ನೀಡುತ್ತಾ, ಸಜ್ಜನರ ಸಂಗಡ ಸಹವಾಸ ಮಾಡಿ ಪ್ರತಿದಿನವೂ ಒಳ್ಳೆಯದರಲ್ಲಿಯೇ ಕಳಿಯಬೇಕು ಎಂದ್ರು.
ಇನ್ನು ಇದೇ ವೇಳೆ ಮಾತನಾಡಿದ ಸಚಿವ ಆನಂದ್ ಸಿಂಗ್ ಪ್ರಧಾನಿ ಮೋದಿ ಅವರು ಈ ಬಗೆಯ ಕಾರ್ಯದ ಮೂಲಕ ದೇಶದ ಧಾರ್ಮಿಕ ವಿಚಾರ ಹಾಗೂ ಪರಂಪರೆ ಉಳಿಸುವ ಕೆಲಸ ಮಾಡ್ತಿದ್ದಾರೆ. ಇನ್ನು ದೇಶದ ಜನರ ಕಷ್ಟಕ್ಕೆ ಸ್ಪಂದನೆ ಮಾಡ್ತಿದ್ದಾರೆ ಎನ್ನೋದಕ್ಕೆ ನಿನ್ನೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಳಿಸಿರುವ ಪೆಟ್ರೋಲ್ ಡಿಸೇಲ್ ಬೆಲೆಗಳೇ ಉದಾಹರಣೆ ಎಂದ್ರು.