SBI ಗ್ರಾಹಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಮೂರು ದಿನ ಈ ಸಮಯದಲ್ಲಿ SBI ಸೇವೆ ಸ್ಥಗಿತ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಖಾತೆ ಹೊಂದಿದ್ದರೆ ಪ್ರಮುಖ ಮಾಹಿತಿ ನಿಮಗಾಗಿ ಇಲ್ಲಿದೆ. SBI ತನ್ನ ಗ್ರಾಹಕರ ಜೊತೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಬ್ಯಾಂಕಿನ ವಿಶೇಷ ಸೇವೆ ನಾಳೆಯಿಂದ ಮೂರು ದಿನಗಳವರೆಗೆ ಕೆಲವು ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

SBI ತನ್ನ 44 ಕೋಟಿ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬ್ಯಾಂಕ್, ಸಿಸ್ಟಂ ನಿರ್ವಹಣೆಗಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಬ್ಯಾಂಕ್ ನಿಗದಿಪಡಿಸಿದ ಸಮಯದಲ್ಲಿ ಯಾವುದೇ ಹಣಕಾಸಿನ ವಹಿವಾಟು ನಡೆಯುವುದಿಲ್ಲ. ಅಕ್ಟೋಬರ್ 09, 10 ಮತ್ತು 11 ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯೋನೊ ಲೈಟ್ ಮತ್ತು ಯುಪಿಐ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಅಕ್ಟೋಬರ್ 9 ರ ರಾತ್ರಿ 12.20 ರಿಂದ 2.20 ರವರೆಗೆ ಸೇವೆ ಸ್ಥಗಿತಗೊಳ್ಳಲಿದೆ. ಅಕ್ಟೋಬರ್ 10 ಮತ್ತು 11 ರಂದು ರಾತ್ರಿ 11.20 ರಿಂದ 1.20 ರವರೆಗೆ ಸೇವೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

Leave a Comment

Your email address will not be published. Required fields are marked *

Translate »
Scroll to Top