ಬಳ್ಳಾರಿ: ನಗರದ ವಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ಡಾ.ಬಿ.ಸಿ.ರಾಯ್ ಉಪನ್ಯಾಸ ಕೊಠಡಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಪ್ಯಾರಾ ಮೆಡಿಕಲ್ ಕೋರ್ಸಿನ ಪ್ರವೇಶಾತಿ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಟೋಕನ್ ವಿಚಾರವಾಗಿ ನೂಕು ನುಗ್ಗಲು ಉಂಟಾಯಿತು. ಕೊನೆಗೂ ಗೃಹ ರಕ್ಷಕ ಸಿಬ್ಬಂದಿಗಳು ನೂಕು ನುಗ್ಗಲು ಗದ್ದಲವನ್ನು ತಾತ್ಕಾಲಿಕವಾಗಿ ಶಮನಗೊಳಿಸಿದರು.
ಮೂಲ ದಾಖಲೆಗಳ ಪರಿಶಿಲನೆಯ ಪೂರ್ವ ವ್ಯವಸ್ಥೆಯನ್ನು ಕಲ್ಪಿಸಿದ ಅಧಿಕಾರಿಗಳ ಕುರಿತು ಪೋಷಕರು ಬೇಸರ ವ್ಯಕ್ತಪಡಿಸಿದರು. ಬೆಳಿಗ್ಗೆಯಿಂದ ಕಾದು ಕುಳಿತ ಪೋಷಕರು ಮಧ್ಯಾನ್ಹ ಊಟಕ್ಕೂ ಹೋಗದೆ ನಮ್ಮ ಮಕ್ಕಳ ಸರದಿ ಯಾವಾಗ ಬರುವುದೋ ಎಂದು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದರು. ಜೊತೆಗೆ ಇಲಾಖೆಯ(Para Medical Board) ತಾಂತ್ರಿಕ ದೋಷದಿಂದಾಗಿ ಇಂಟಿಮೇಷನ್ ಮತ್ತು ಚೆಕ್ ಲಿಸ್ಟ್ ಡೌನ್ಲೋಡ್ ಮಾಡಿಕೊಳ್ಳುವಲ್ಲಿ ಸಮಸ್ಯೆಯನ್ನು ಎದುರಿಸಿದರು. ಇನ್ನೂ (08-10-2021) ಮತ್ತು (09-10-2021) ನಡೆಯುವ ಮೂಲ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ಅನುಕೂಲ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.