ಬೆಂಗಳೂರು: ಅಕ್ಟೋಬರ್ 11ರಿಂದ 16ರವರೆಗೆ ಹೈಕೋರ್ಟ್ನ ಎಲ್ಲಾ ಪೀಠಗಳಿಗೆ ದಸರಾ ರಜೆ ನೀಡಲಾಗಿದೆ. ರಾಜ್ಯ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ರಜೆ ನೀಡಲಾಗಿದೆ.
ರಜೆ ದಿನಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ಗಳ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ತುರ್ತು ಇದ್ದಲ್ಲಿ ಮಧ್ಯಂತರ ಆದೇಶ, ತಡೆಯಾಜ್ಞೆ ಅರ್ಜಿಗಳು ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆ ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ತುರ್ತು ಅರ್ಜಿಗಳಿದ್ದಲ್ಲಿ ಅವುಗಳ ವಿಚಾರಣೆ ಬೆಳಗ್ಗೆ 10.30ರಿಂದ 12 ನಡುವೆ ನಡೆಯಲಿದೆ. ಈ ಬಗ್ಗೆ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮ ಅವರ ಆದೇಶದ ಅನ್ವಯ ರಿಜಿಸ್ಟರ್ ಕೆ.ಎಸ್.ಭರತ್ಕುಮಾರ್ ರಜೆ ಆದೇಶ ಹೊರಡಿಸಿದ್ದಾರೆ.