ದಾವಣಗೆರೆ

ವೃದ್ಧ ದಂಪತಿಗಳ ಜೋಡಿ ಕೊಲೆ

ದಾವಣಗೆರೆ,ಜನವರಿ,25 ;ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವೃದ್ಧ ದಂಪತಿಗಳನ್ನು ಕೊಚ್ಚಿಕೊಲೆ ಮಾಡಿರುವ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ಎಲೆ ಬೇತೂರ ಗ್ರಾಮದ ಗುರುಸಿದ್ದಯ್ಯ (80) ಸರೋಜಮ್ಮ (75) ಕೊಲೆಯಾದ ದಂಪತಿಗಳು. ಮೂರು ಹೆಣ್ಣು ಮಕ್ಕಳನ್ನ ಮದ್ವೆ ಮಾಡಿ ಕೊಟ್ಟಿದ್ದ ದಂಪತಿಗಳು.ಮನೆಯಲ್ಲಿ ಪತಿ‌ ಪತ್ನಿ ಇಬ್ಬರೇ ವಾಸ ಮಾಡುತ್ತಿರುವುದನ್ನು ತಿಳಿದ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ‌ ಬಾಗಿಲು ಹಾಕಿಕೊಂಡು ಜೋಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪಕ್ಕದ ಮನೆಯವರು ಬೆಳಿಗ್ಗೆ ಸರೋಜಮ್ಮ ಅವರನ್ನ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ […]

ವೃದ್ಧ ದಂಪತಿಗಳ ಜೋಡಿ ಕೊಲೆ Read More »

ಕಾಂಗ್ರೆಸ್ ಜಿಲ್ಲಾಧ್ಯಕ್ಷ-ಶಾಂತನಗೌಡ ಅಪ್ತರ ನಡುವೆ ಟಾಕ್ ವಾರ್ ..!

ದಾವಣಗೆರೆ,ಜನವರಿ,20 : ನಿಮ್ಮ ಶಾಂತನಗೌಡರಿಗೆ ಈ ಬಾರಿ ಟಿಕೆಟ್ ಕೊಡಿಸಿ ಕುರುಬರ ಮತ ಪಡೆಯಿರಿ ನೋಡೋಣ. ಶಾಂತನಗೌಡರಿಗೆ ಲಿಂಗಾಯತರ ವೋಟ್ ಕೂಡ ಬೀಳೋದಿಲ್ಲ. ನನ್ನ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ನೋಡಿ ನಿಮಗೆ ಕುರುಬರು ವೋಟ್ ಕೊಡ್ತಾರೆ. ಟಿಕೆಟ್ ಬಗ್ಗೆ ನೀವ್ಯಾಕೆ ಮಾತನಾಡುತ್ತೀರಿ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾಜಿ ಶಾಸಕ ಶಾಂತನಗೌಡ ಅಭಿಮಾನಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಬೈದಿರುವ ಆಡಿಯೋ ವೈರಲ್ ಆಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ. ಮಂಜಪ್ಪ, ಹೊನ್ನಾಳಿ ಮಾಜಿ ಶಾಸಕ

ಕಾಂಗ್ರೆಸ್ ಜಿಲ್ಲಾಧ್ಯಕ್ಷ-ಶಾಂತನಗೌಡ ಅಪ್ತರ ನಡುವೆ ಟಾಕ್ ವಾರ್ ..! Read More »

ಔಷಧಿ ಬೆಲೆ ನಿಗದಿ ಅಧಿಕಾರ ಖಾಸಗಿ ಕಂಪನಿಗಳಿಗೆ

ದಾವಣಗೆರೆ,ಜನವರಿ,20 : ಔಷಧಿಗಳ ಬೆಲೆ ನಿಯಂತ್ರಣವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ ಬೆಲೆ ನಿಗದಿ ಮಾಡಲು ಖಾಸಗಿ ಸಂಸ್ಥೆಗಳಿಗೆ ಅಧಿಕಾರ ನೀಡಿರುವುದನ್ನು ವಿರೋಧಿಸಿ ಇಂದು ಔಷಧಿ ಮಾರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿವಿಧ ಔಷಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 700 ಕ್ಕೂ ಹೆಚ್ಚು ಔಷಧಿ ಮಾರಾಟ ಪ್ರತಿನಿಧಿಗಳು ಇಂದು ತಮ್ಮ ಕೆಲಸಗಳನ್ನು ನಿಲ್ಲಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಔಷಧ ನಿಯಂತ್ರಣ ಕಾಯಿದೆ, 2013 ರಲ್ಲಿ

ಔಷಧಿ ಬೆಲೆ ನಿಗದಿ ಅಧಿಕಾರ ಖಾಸಗಿ ಕಂಪನಿಗಳಿಗೆ Read More »

ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ -7 ಮಂದಿ ಮೃತ

ದಾವಣಗೆರೆ,ಜನವರಿ,14 : ಸಂಕ್ರಾಂತಿ‌ಯ ದಿನದಂದೇ ಜವರಾಯನ ತನ್ನ ಅಟ್ಟಹಾಸ ಮೆರೆದಿದ್ದಾನೆ. ಬೆಳ್ಳಂ ಬೆಳಗ್ಗೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಬಳಿ ಭೀಕರ ಅಪಘಾತ ಸಂಭವಿಸಿ 7 ಮಂದಿ ಮೃತಪಟ್ಟಿದ್ದಾರೆ. ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಘಟನೆ ನಡೆದಿದ್ದು ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಆರು ಜನ ಸ್ಥಳದಲ್ಲಿಯೇ ಸಾವು. ಓರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ಪರಿಶೀಲನೆ

ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ -7 ಮಂದಿ ಮೃತ Read More »

ವಸತಿ ಶಾಲೆಯ 32 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆ

ದಾವಣಗೆರೆ,ಜ,11 : ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ಪ್ರಾಚಾರ್ಯ ಸೇರಿ ಒಟ್ಟು 32 ಮಕ್ಕಳಿಗೆ ಕೊರೊನಾ ಸೋಂಕು ತಗಲಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಗೆ ಮಕ್ಕಳಿ ಸೋಂಕು ತಗುಲಿದೆ. ಆರರಿಂದ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸೋಂಕು ಪತ್ತೆಯಾಗಿದೆ. ನಾಲ್ವರು ಮಕ್ಕಳಿಗೆ ಚನ್ನಗಿರಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಉಳಿದವರಿಗೆ ಶಾಲೆಯಲ್ಲಿಯೇ ಇರಿಸಿ ತಾಲೂಕು ಆಡಳಿತ ಸೂಕ್ತ ಚಿಕಿತ್ಸೆ ಒದಗಿಸುತ್ತಿದೆ. ವಿಷಯ

ವಸತಿ ಶಾಲೆಯ 32 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆ Read More »

ಕಿವಿಗೆ ಹೂವು, ಮೂಗಿಗೆ ತುಪ್ಪ ಸವರಿದ ಮಾಜಿ ಸಿಎಂ ಯಡಿಯೂರಪ್ಪ

ದಾವಣಗೆರೆ,ಜ,10 : ಮಾಜಿ ಬಿ.ಎಸ್​. ಯಡಿಯೂರಪ್ಪ ಅವರು ಮೀಸಲಾತಿ ವಿಚಾರದಲ್ಲಿ ನಾಯಕ ಸಮುದಾಯಕ್ಕೆ ಕಿವಿಗೆ ಹೂವು ಇಟ್ಟು, ಮೂಗಿಗೆ ತುಪ್ಪ ಸವರಿದರು ಎಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಶ್ರೀ ಕಿಡಿಕಾರಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಈ ಬಾರಿ ನಡೆಯುವ ನಾಲ್ಕನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಡೆಡ್ ಲೈನ್ ಕೊಡುತ್ತೇವೆ. ಮುಂದಿನ ತಿಂಗಳು ಫೆ.9ರೊಳಗೆ ವಾಲ್ಮೀಕಿ ಜಾತ್ರೆಯಲ್ಲಿ

ಕಿವಿಗೆ ಹೂವು, ಮೂಗಿಗೆ ತುಪ್ಪ ಸವರಿದ ಮಾಜಿ ಸಿಎಂ ಯಡಿಯೂರಪ್ಪ Read More »

ನಿಯಮಬಾಹಿರವಾಗಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ

ದಾವಣಗೆರೆ,ಜ,8 : ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನಿಯಮಬಾಹಿರವಾಗಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ 10 ಲಕ್ಷ ಹಣ ಪಾಲಿಕೆಗೆ ದುಂದುವೆಚ್ಚವಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2017ರಲ್ಲಿ ರಾಜ್ಯ ಸರ್ಕಾರವು ಮೇಯರ್‌ ಹಾಗೂ ಉಪಮೇಯರ್‌ ಹೊರತುಪಡಿಸಿ ಮತ್ತೆ ಯಾವುದೇ ಚುನಾಯಿತ ಜನಪ್ರತಿನಿಧಿಗಳಿಗೆ ವಾಹನ ಸೌಲಭ್ಯ ಕಲ್ಪಿಸಬಾರದು ಎಂದು ಆದೇಶ ಹೊರಡಿಸಿದೆ. ಹೀಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ

ನಿಯಮಬಾಹಿರವಾಗಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ Read More »

ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ ವಿತರಣೆ

ದಾವಣಗೆರೆ,ಜ,8 : ಕೃಷಿ ಇಲಾಖೆ ವತಿಯಿಂದ ಆನಗೋಡು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಸಕ ಪ್ರೊ. ಲಿಂಗಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ರೈತರೆ ದೇಶದ ಬೆನ್ನೆಲುಬು ರೈತರು ಬೆಳೆ ಬೆಳೆಯದೇ ಇದ್ದರೆ ಆಹಾರದ ಕೊರತೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಕೃಷಿ ಮಾಡಲು ಮುಖ್ಯವಾಗಿ ಬೇಕಾಗಿರುವುದು ನೀರು. ಮಳೆ ಚೆನ್ನಾಗಿ ಬಂದಾಗ ಮಳೆನೀರು ಕೊಯ್ಲು ಮಾಡಿ ಸಂರಕ್ಷಿಸಿಟ್ಟುಕೊಳ್ಳುವಂತಹ ಘಟಕಗಳನ್ನು ಪ್ರತಿಯೊಬ್ಬ ರೈತರು ತಮ್ಮ

ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ ವಿತರಣೆ Read More »

ಮೊದಲ‌ ದಿನ 17 ಸಾವಿರ ಮಕ್ಕಳಿಗೆ ‌ಲಸಿಕೆ ನೀಡಿಕೆ

ದಾವಣಗೆರೆ. ಜ;4 : ದಾವಣಗೆರೆ ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಇಂದೂ ಕೂಡ ಮುಂದುವರಿದಿದೆ. ಜಿಲ್ಲೆಯ 532 ಸ್ಥಳಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಶಾಲಾ ಮಕ್ಕಳು ಮತ್ತು ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.‌ ನಿನ್ನೆ ಒಂದೇ ದಿನ 17 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಹೇಳಿದ್ದಾರೆ. ಜಿಲ್ಲೆಯಲ್ಲಿ 84 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ನಾಳೆಯೊಳಗೆ ಈ ಗುರಿ

ಮೊದಲ‌ ದಿನ 17 ಸಾವಿರ ಮಕ್ಕಳಿಗೆ ‌ಲಸಿಕೆ ನೀಡಿಕೆ Read More »

ಮಕ್ಕಳಿಗೆ ಉಚಿತ ಕೊರೊನಾ ಲಸಿಕೆ ಕಾರ್ಯಕ್ರಮ

ಹರಿಹರ,ಜ,3: 15 ರಿಂದ 18 ವರ್ಷದ ವಯೋಮಾನದ ಮಕ್ಕಳಿಗೆ ಉಚಿತ ಕೊರೊನಾ ಲಸಿಕೆ ಕಾರ್ಯಕ್ರಮವನ್ನು ಮಾನ್ಯ ಜನಪ್ರೀಯ ಶಾಸಕರಾದ ಎಸ್ ರಾಮಪ್ಪನವರು ಉದ್ಘಾಟಿಸಿದರು.

ಮಕ್ಕಳಿಗೆ ಉಚಿತ ಕೊರೊನಾ ಲಸಿಕೆ ಕಾರ್ಯಕ್ರಮ Read More »

Translate »
Scroll to Top