ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ
ದಾವಣಗೆರೆ: ರೈಲಿನಿಂದ ಇಳಿಯುವಾಗ ರೈಲಿನಲ್ಲಿಯೇ ಬಿಟ್ಟು ಹೋಗಿದ್ದ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರ ನಗದು ಹೊಂದಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ರೈಲ್ವೆ ರಕ್ಷಣೆ ತಲುಪಿಸಿದ್ಧಾರೆ. ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಶ್ರೀನಿವಾಸ ರಾಜ್ ಕೆ.ಎಂ ಅವರು ಬೆಂಗಳೂರಿನ ಕೆಂಗೇರಿಯಿಂದ ಹರಿಹರಕ್ಕೆ ಭಾನುವಾರ ಬೆಳಗ್ಗೆ ಬಂದು ಇಳಿದು ಹೋಗಿದ್ದರು. ಈ ವೇಳೆ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರವಿದ್ದ ಬ್ಯಾಗನ್ನು ರೈಲಿನಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು. ಈ ವಿಚಾರ ಗಮನಕ್ಕೆ ಬಂದ […]