ಬೆಂಗಳೂರು: ಬೆಂಗಳೂರಿನ ಡೈರಿ ಸರ್ಕಲ್ ಸಮೀಪದ ನಿವಾಸಿ ಲಕ್ಷ್ಮಮ್ಮ ಮಂಜುನಾಥ್ ಕುಟುಂಬ ಆಂಧ್ರಪ್ರದೇಶದ ಕದ್ರಿಯಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ಗರ್ಭಗುಡಿಗೆ 72 ಕೆ.ಜಿ.ಬೆಳ್ಳಿಯಿಂದ ನಿರ್ಮಿಸಿರುವ ಮುಖ ಮಂಟಪವನ್ನು ಕೊಡುಗೆಯಾಗಿ ನೀಡಿದ್ದಾರೆ.
ಇತ್ತೀಚೆಗೆ ಕದ್ರಿಗೆ ಭೇಟಿ ನೀಡಿದ ಲಕ್ಷ್ಮಮ್ಮ ಮಂಜುನಾಥ್, ಅನಂದ್, ಮಿಟ್ಟಾ ಮತ್ತಿತರೆ ಕುಟುಂಬ ಸದಸ್ಯರು ಬೆಳ್ಳಿ ಮುಖಮಂಟಪವನ್ನು ಅರ್ಪಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ ಕೃಷ್ಣ, ಅರ್ಚಕರಾದ ಕುಮಾರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
Facebook
Twitter
LinkedIn
WhatsApp
Email
Print
Telegram