ಬೃಹತ್ ಮೊತ್ತದ ರನ್ಗಳ ಗುರಿ ನೀಡಿದರೂ ಜಯಭೇರಿ ಭಾರಿಸಿದ ಧೋನಿ ಬಳಗ
ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ಪಂದ್ಯವು ಬಹು ರೋಚಕದ ನಡುವೆ ನಡೆದಿದ್ದು, ಮಳೆರಾಯನನ್ನು ಹಿಮ್ಮೆಟ್ಟಿಸಿದಂತೆ ಐಪಿಎಲ್ ಕಪ್‍ನ್ನು ಮುಡಿಗೇರಿಸಿಕೊಂಡಿದ್ದಾರೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್.
ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡರೆ, ಬ್ಯಾಟಿಂಗ್ ಗೆ ಇಳಿದ ಗುಜರಾತ್ ಟೈಟನ್ಸ್ ತಂಡ 20 ಓವರ್‍ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 214 ರನ್‍ಗಳ ಗುರಿಯನ್ನು ಅತಿಥೇಯ ಚೆನ್ನೈ ತಂಡಕ್ಕೆ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲಿಯೇ ವಿಘ್ನ ಎಂಬಂತೆ ಮಳೆರಾಯ ಅಡ್ಡ ಬಂದನು.
ಇನ್ನೂ ಮೊದಲನೇ ಓವರ್ ವೇಳೆಗೆ ಮಳೆ ಬಂದು ಕೆಲ ಕಾಲ ಆಟವನ್ನು ನಿಲ್ಲಿಸಬೇಕಾಯಿತು. ಒಂದು ವೇಳೆ ಮಳೆ ನಿಲ್ಲದೆ ಹೋಗಿದ್ದರೆ ಹೆಚ್ಚು ಅಂಕಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ ಗೆ ಈ ಬಾರಿಯ ಐಪಿಎಲ್ ಕಪ್ ಅನ್ನು ನೀಡಬೇಕಿತ್ತು. ಆದರೆ ಅಸ್ಟು ಸುಲಭವಾಗಿ ಯಾರಿಗೂ ಕಪ್ ಸಿಗಬಾರದು. ನಿಜವಾಗಿಯೂ ಆಟವನ್ನು ಆಡಿಯೇ ಕಪ್ ಅನ್ನು ಗೆಲ್ಲಬೇಕು ಎಂದು ಮತ್ತೆ ಮಳೆ ರಾಯ ಮಳೆ ಸುರಿಸುವುದನ್ನು ಹಿಂದಕ್ಕೆ ಪಡೆದಂತಾಗಿತ್ತು.
ಮತ್ತೆ ಆಟ ಆರಂಭ ವಾಗುವಷ್ಟರಲ್ಲಿ ಸಮಯ ಸುಮಾರು 12.10 ಗಂಟೆ ಸುಮಾರಿಗೆ ಆಟ ಆರಂಭವಾಗಿದ್ದು, ಡಕ್ವರ್ಥ್ ಲೂಯಿಸ್ ನಿಮಯದ ಪ್ರಕಾರ 15 ಓವರ್‍ಗಳಿಗೆ 171 ರನ್‍ಗಳ ಗುರಿಯನ್ನು ಚೆನ್ನೈ ತಂಡಕ್ಕೆ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ್ದ ಧೋನಿ ಪಡೆ ಕೊನೆಯ ಎರಡು ಬಾಲ್‍ಗಳಲ್ಲಿ 10 ರನ್‍ಗಳ ಅವಶ್ಯವಿದ್ದಾಗ ಮಿಂಚಿದ ರವೀಂದ್ರ ಜಡೇಜ ಒಂದು ಬಾಲ್ ಸಿಕ್ಸ್ ಇನ್ನೊಂದು ಬಾಲ್ ಫೋರ್ ಭಾರಿಸುವ ಮೂಲಕ ತಂಡಕ್ಕೆ ಜಯ ತಂದನು.
ಮಳೆಯನ್ನೂ ಲೆಕ್ಕಿಸದೆ ಕ್ರೀಡಾಂಗಣದಲ್ಲಿ ಕೂತಿದ್ದ ಅಭಿಮಾನಿಗಳಿಗೆ ಕೊನೆಯ ಓವರ್ ಮುಗಿಯುವ ತನಕವೂ ಕಣ್ಣು ಮಿಟಿಕಿಸು ನೋಡುತ್ತಿದ್ದ ಅಭಿಮಾನಿಗಳಿಗೆ ಒಂದು ಬಾರಿಗೆ ಯುದ್ಧ ಗೆದ್ದಂತಾಗಿತ್ತು. ಸುಮಾರು 2 ಗಂಟೆ ವೇಳೆ ಆಟ ಮುಗಿದಿದ್ದು, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆರಂಭಿಕ ಜೋಡಿ ಆಟರಂಭಿಸಿದ ಡೆವೋನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ ವಾಡ್ 6.3 ಓವರ್ ಗಳಲ್ಲಿ 74 ರನ್ ಗಳಿಸಿದರು. ನಂತರ ಶಿವಂ ದುಬೆ 32 ರನ್ ಅಜಿಂಕ್ಯ ರಹಾನೆ 27 ರನ್ ಹಾಗೂ ಅಂಬಂಟಿ ರಾಯುಡು 19 ರನ್ ಗಳಿಸಿದರು. ನಂತರ ಕ್ರೀಜ್ ಗೆ ಬಂದ ರವೀಂದ್ರ ಜಡೆಜಾ ಕೊನೆಯ ಓವರ್ ನ ಕೊನೆಯ ಎರಡು ಬಾಲ್‍ಗಳನ್ನು ಸಿಕ್ಸ್ ಮತ್ತು ಫೋರ್ ಭಾರಿಸುವ ಮೂಲಕ ಚೆನ್ನೈ ತಂಡ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್‍ನ ವೃದ್ಧಿಮಾನ್ ಸಾಹ ಬಿರುಸಿನ ಬ್ಯಾಟಿಂಗ್ ಮಾಡಿ 39 ಬಾಲ್‍ನಲ್ಲಿ 1 ಸಿಕ್ಸರ್, 5 ಫೋರ್ ಗಳೊಂದಿಗೆ 54 ರನ್ ಗಳನ್ನು ಪಡೆದರು. ಶುಭ್ಮನ್ ಗಿಲ್ 20 ಬಾಲ್‍ನಲ್ಲಿ 7 ಫೋರ್ ಗಳೊಂದಿಗೆ 39 ರನ್ ಸಿಡಿಸಿ ಔಟ್ ಆದರು. ಹಾರ್ದಿಕ್ ಪಾಂಡ್ಯ 12 ಬಾಲ್ ನಲ್ಲಿ 2 ಸಿಕ್ಸರ್‍ಗಳ ಸಹಾಯದೊಂದಿಗೆ 21 ರನ್ ಬಾರಿಸಿದರು. ಕ್ರೀಸ್‍ನಲ್ಲಿ ಕೊನೆಯ ವರೆಗೆ ನಿಂತು ಆಡಿದ ಸಾಯಿ ಸುದರ್ಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, 47 ಬಾಲ್‍ಗಳಲ್ಲಿ 6 ಸಿಕ್ಸರ್ ಮತ್ತು 8 ಫೋರ್ ಗಳೊಂದಿಗೆ 97 ರನ್‍ಗಳನ್ನು ಭಾರಿಸಿದರು. ಒಟ್ಟಾರೆಯಾಗಿ 214ರನ್ ಗಳ ಗುರಿಯನ್ನು ನೀಡಿತ್ತು.
ಮಳೆ ಬಂದರೂ ಪಂದ್ಯ ಮುಕ್ತಾಯ
ಅಹಮದಾಬಾದ್ ನಲ್ಲಿ ಬೆಳಗ್ಗಿನಿಂದಲೇ ಬಿಸಿಲ ಝಳ ಹೆಚ್ಚಾಗಿದ್ದರೂ, ಸಂಜೆಯ ವೇಳೆಯೂ ವಾತಾವರಣ ತಿಳಿಯಾಗಿತ್ತು. ಪಂದ್ಯದ ವೇಳೆ ಮೋಡೊ ಮುಸುಕಿದ ವಾತಾವರಣವಿತ್ತು. ಗುಜರಾತ್ ಟೈಟನ್ಸ್ ನ ಬ್ಯಾಟಿಂಗ್ ಮುಗಿದು ಚೆನ್ನೈ ತಂಡ ಬ್ಯಾಟಿಂಗ್ ಇಳಿದ ಕೆಲವೇ ಕ್ಷಣಗಳಲ್ಲಿ ಧೋ ಎಂದು ಸುರಿಯಿತು.
ಡಕ್ವರ್ಥ್ ಲೂಯಿಸ್ ನಿಯಮ
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತ್ತು. ಆದರೆ ಮಳೆ ಬಂದು ಆಟ ಸ್ಥಗಿತಗೊಂಡ ಕಾರಣದಿಂದ ಮಳೆ ನಿಂತ ಮೇಲೆ ಅಂಪೈರ್ ಗಳು ಡಕ್ವರ್ಥ್ ಲೂಯಿಸ್ ನಿಮಯದ ಪ್ರಕಾರ ಗುರಿಯನ್ನು ಪರಿಷ್ಕರಿಸಿದ್ದು 15 ಓವರ್ ನಲ್ಲಿ 171 ರನ್ ಗಳ ಬೃಹತ್ ಗುರಿಯನ್ನು ನಿಗದಿ ಪಡಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರದಿಂದ ವಿರೋಚಿತ ಜಯ ದಾಖಲಿಸಿತು.
5 ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಚೆನ್ನೈ
ಈ ಹಿಂದೆ 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಸೆಣಸಾಟ ನಡೆಸಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಕಪ್ ಅನ್ನು ಮುಡಿಗೇರಿಸಿಕೊಂಡಿದ್ದರು. ಅದೇ ರೀತಿ 2011ರಲ್ಲಿ ಆರ್ ಸಿಬಿ ಬೆಂಗಳೂರು ಎದುರು ಗೆದ್ದು ಬೀಗಿದ್ದರು. ಅದಾದ ಬಳಿಕ ಮತ್ತೆ 2018ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಎದುರು ನಡೆದ ಪಂದ್ಯದಲ್ಲಿ ಗೆದ್ದಿದ್ದರು. ಮತ್ತೆ 2021ರಲ್ಲಿ ನಡೆದ ಐಪಿಎಲ್‍ನಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಎದುರು ಜಯಗಳಿಸಿದ್ದರು. ಇದೀಗ 2023ರಲ್ಲಿ ಮತ್ತೊಮ್ಮೆ ಗುಜರಾತ್ ಟೈಟನ್ಸ್ ವಿರುದ್ಧ ವಿರೋಚಿತ ಗೆಲುವು ದಾಖಲಿಸಿದ್ದಾರೆ. ಆ ಮೂಲಕ 5ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ದಾಖಲೆ ಬರೆದ ಧೋನಿ
ಐಪಿಎಲ್ ನ 14 ಆವೃತ್ತಿಗಳಲ್ಲಿ ಅತಿ ಹೆಚ್ಚು ಫೈನಲ್ ಪಂದ್ಯಗಳನ್ನು ಆಡಿದ ಆಟಗಾರನೆಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 11 ಫೈನಲ್ ಪಂದ್ಯಾವಳಿಗಳಲ್ಲಿ ಆಟ ಆಡಿ ದಾಖಲೆ ಬರೆದಿದ್ದಾರೆ.