ಬಳ್ಳಾರಿ: ಬಣಜಿಗ ಸಮಾಜದ ಪ್ರತಿಯೊಬ್ಬರೂ ಸ್ವಾಭಿಮಾನಕ್ಕೆ ಒತ್ತು ಕೋಡುತ್ತಾರೆ. ತಮ್ಮ ಸಮಾಜದವರ ಗೌರವಕ್ಕೆ ಧಕ್ಕೆ ಬಂದರೆ ಅವರು ಸಹಿಸುವುದಿಲ್ಲ ಇದಕ್ಕೆ ಉದಾಹರಣೆ ನಮ್ಮ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಹೇಳಿದರು.
ನಗರದ ಬಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಅಭಿನಂದನಾ ಸಮಾರಂಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಮಾತನಾಡಿದರು.
ಬಣಜಿಗ ಸಮಾಜ ಹಿಂದಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ತಮ್ಮ ಸಮಾಜಕ್ಕೆ ದಕ್ಕೆಯಾದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಗುಣ ಅವರಲ್ಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಒಬ್ಬರೆ ಬಂದಿಲ್ಲಾ ಅವರ ಜೋತೆಗೆ ಎಲ್ಲಾ ಮುಖಂಡರನ್ನು ಕರೆ ತಂದಿದ್ದಾರೆ.
ನಮ್ಮ ಪಕ್ಷಕ್ಕೆ ಅವರ ದೊಡ್ಡ ಕೊಡುಗೆ ಇದೆ ಎಂದ ಅವರು ಬಣಜಿಗ ಸಮುದಾಯದ 2ಎ ಸಮಸ್ಯೆಯನ್ನು ಆದಷ್ಟು ಬೇಗ ಬಗೆ ಹರಿಸುತ್ತೆನೆ ಎಂದರು.
ಇದೇ ವೇಳೆಯಲ್ಲಿ ಪತ್ತಿನ ಸಹಕಾರ ಬ್ಯಾಂಕ್ ನಲ್ಲಿ ಐದು ಲಕ್ಷ ಹಣವನ್ನು ಬ್ಯಾಂಕ್ ಠೇವಣಿ ಇಡುತ್ತೇನೆ ಎಂದು ಮಾನ್ಯ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಈ ಸಂದರ್ಭದಲ್ಲಿ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ, ಹಾಸ್ಯ ನಟ ದೊಡ್ಡಣ್ಣ, ಸಂಗಮೇಶ, ವೈ.ಎಂ ಸತೀಶ್, ಕೆ.ಎಸ್ ನಾಗರಾಜ್, ಪಂಪಾಪತಿ, ಶಾಂತ ಸೇರಿದಂತೆ ಇತರರು ಹಾಜರಿದ್ದರು.