ರಾಜ್ಯದಲ್ಲಿ ೨೮,೬೫೭ ಬಾಲ ಗರ್ಭಿಣಿಯರು, ೧೦ ಇಲಾಖೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಟಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಾಯ್ತನದ ವಯಸ್ಸಿಗೂ ಮೊದಲೆ ರಾಜ್ಯದಲ್ಲಿ ಬಾಲ ರ‍್ಭಿಣಿಯರ ಸಂಖ್ಯೆ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ೨೮,೬೫೭ ಬಾಲ ರ‍್ಭಿಣಿಯರು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದ್ದಂತೆ ಹತ್ತು ಇಲಾಖೆಗೆ ಚಾಟಿ ಬೀಸಿದ್ದಾರೆ.

ಕೆಲವು ತಂದೆ-ತಾಯಿಗಳಿಗೆ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಅನ್ನೋ ಭಾವನೆ ಇರುತ್ತೆ. ಇನ್ನು ಕೆಲವರಿಗೆ ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು ಅತ್ಯಾಚಾರ ಹಾಗೂ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ರ‍್ಭಿಣಿಯರು ಸಂಖ್ಯೆ ಏರಿಕೆಗೆ ಕಾರಣವಾಗುತ್ತಿದ್ದು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ೧೮ ರ‍್ಷ ತುಂಬುವುದಕ್ಕಿಂತ ಮೊದಲೆ ರ‍್ಭಿಣಿ ಆಗುತ್ತಿದ್ದು ಬಾಲಕಿಯರು ಹಲವು ದೈಹಿಕ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಹೀಗಾಗಿ ಮುಖ್ಯಮಂತ್ರಿಗಳು ಎಲ್ಲ ಇಲಾಖೆಗಳಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಪ್ರೇಮ ವಿವಾಹ, ಬಾಲ್ಯ ವಿವಾಹ, ಲಿವ್ ಇನ್ ರಿಲೇಶನ್ ಶಿಫ್, ಲೈಂಗಿಕ ದರ‍್ಜನ್ಯ, ಲೈಂಗಿಕ ತಿಳವಳಿಕೆ ಕೊರತೆ, ಜೀವನ ಶೈಲಿ ಸೇರಿದ್ದಂತೆ ನಾನಾ ಕಾರಣಗಳಿಂದ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಬಾಲ ರ‍್ಭಿಣಿಯರು ಸಂಖ್ಯೆ ೨೮,೬೫೭ ಕ್ಕೆ ಏರಿಕೆಯಾಗಿದೆ. ಕೇಂದ್ರ ರ‍್ಕಾರದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪರ‍್ಟಲ್ ಪ್ರಕಾರ ೨೦೨೩ ಜನವರಿಯಿಂದ ನವೆಂಬರ್ ತಿಂಗಳವರೆಗೆ ರಾಜ್ಯದಲ್ಲಿ ೨೮,೬೫೭ ಬಾಲ ರ‍್ಭಿಣಿಯರು ಕಂಡು ಬಂದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮೆಟ್ರಿಕ್ ಪರ‍್ವ ಹಾಸ್ಟೆಲ್ ವಿದ್ಯರ‍್ಥಿನಿ ಪ್ರಕರಣ ಬಳಿಕ ರ‍್ಕಾರ ಅರ‍್ಟ್ ಆಗಿದ್ದುನಿರಂತರವಾಗಿ ಏರಿಕೆಯಾಗುತ್ತಿರುವ ಬಾಲ ರ‍್ಣಿಯರ ಸಂಖ್ಯೆ ತಡೆಯಲು ರ‍್ಕಾರ ಮುಂದಾಗಿದೆ.

 ಸಿಎಂ ಸೂಚನೆಯಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಗೃಹ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದ್ದಂತೆ ವಿವಿಧ ಇಲಾಖೆಗಳು ಕೇಂದ್ರ ಕರ‍್ಯಪಡೆ ರಚನೆಗೆ ಮುಂದಾಗಿದೆ. ತರ‍್ತಾಗಿ ಈ ಬಗ್ಗೆ ಸಭೆ ನಡೆಸಿ ಕ್ರಮವಹಿಸಿ ವರದಿ ನೀಡುವಂತೆ ರ‍್ಕಾರ ಸೂಚಿಸಿದ್ದು ಬಾಲ ರ‍್ಭಿಣಿಯರ ಪ್ರಮಾಣ ನಿಯಂತ್ರಣಕ್ಕೆ ರ‍್ಕಾರ ಕಾನೂನು ಬದಲಾವಣೆಯ ಬಗ್ಗೆಯೂ ಚಿತಂನೆ ಶುರು ಮಾಡಿದೆ. ಈಗಾಗಲೇ ಹಲವು ಇಲಾಖೆಗಳು ಈ ಬಗ್ಗೆ ಸಭೆ ಮಾಡಿದ್ದು ಕೇಂದ್ರ ಕರ‍್ಯಪಡೆ ರಚನೆಗೆ ಮುಂದಾಗಿವೆ. ತರ‍್ತು ಕ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ರ‍್ಕಾರಕ್ಕೆ ಒತ್ತಾಯ ಮಾಡಿದೆ.

ಬಾಲಕಿಯರು ರ‍್ಭ ಧರಿಸಿದ ವೇಳೆ ರ‍್ಭಪಾತ, ಅವಧಿ ಪರ‍್ವ ಪ್ರಸವ, ದೈಹಿಕ ನ್ಯೂನತೆ ಹೊಂದಿರುವ ಶಿಶು ಜನನ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಬಾಲ್ಯದಲ್ಲೇ ರ‍್ಭ ಧರಿಸಿದರೆ ಬಾಲಕಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಕಂಡುಬರುತ್ತಿವೆ ಅಂತ ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ಇಂದಿರಾ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಾಲಕಿ ರ‍್ಭಿಣಿಯಾಗುವುದು ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇದ್ದು, ಬಾಲ್ಯ ವಿವಾಹ ಹಾಗೂ ಇನ್ನಿತರ ಕಾರಣಗಳಿಂದ ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲೇ ರ‍್ಭ ಧರಿಸುವ ಪ್ರಕರಣಗಳು ಸಾಮಾಜಿಕ ಪಿಡುಗಾಗಿ ಪರಿರ‍್ತನೆಯಾಗಿದೆ. ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು ರ‍್ಕಾರ ಈ ಬಗ್ಗೆ ತ್ವರೀತವಾಗಿ ಕ್ರಮಕ್ಕೆ ಮುಂದಾಗಬೇಕಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top