ಬೆಂಗಳೂರು : ಹುತಾತ್ಮ ವೀರ ಯೋಧರ ಗೌರವಾರ್ಥ ಶೀ ಫಾರ್ ಸೊಸೈಟಿಯಿಂದ ಬೃಹತ್ ಬೈಕ್ ಜಾಥ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ, ಕಾರ್ಗಿಲ್ ವೀರ ಯೋಧರು, ಸಂಚಾರಿ ಪೊಲೀಸರ ತಂಡ ಹಾಗೂ ಎ7 ಎಂಟರ್ಟೈನ್ಮೆಂಟ್, ಮಹಿಳಾ ಬೈಕರ್ಸ್ ನ ಶೀ ಫಾರ್ ಸೊಸೈಟಿಯಿಂದ ಬೃಹತ್ ಜನಜಾಗೃತಿಗಾಗಿ “ರೈಡ್ ವಿಥ್ ಸೋಲ್ಡರ್ಸ್” ಬೈಕ್ ಜಾಥ ಆಯೋಜಿಸಲಾಗಿತ್ತು. ಎಂ.ಜಿ. ರಸ್ತೆಯ ಮಾಣಿಕ್ ಶಾ ಪರೇಡ್ ಮೈದಾನದಿಂದ ವಿಜಯನಗರದ ಬಿಜಿಎಸ್ ಕ್ರೀಡಾಂಗಣದವರೆಗೆ ಸುಮಾರು 12 ಕಿಲೋಮೀಟರ್ ಜಾಥ ಒಂದು ಸಾವಿರ ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜದೊಂದಿಗೆ ಸಾಗಿತು. ಶಾಸಕ ಸಿ ಕೆ . ರಾಮಮೂರ್ತಿ, ಮಾಜಿ ಯೋಧರ ಸಂಘದ ಅಧ್ಯಕ್ಷ ಶಿವಣ್ಣ, ಶೀ ಫಾರ್ ಸೊಸೈಟಿಯ ಸಂಸ್ಥಾಪಕರಾದ ಹರ್ಷಿಣಿ ವೆಂಕಟೇಶ್, ಮತ್ತಿತರೆ ಗಣ್ಯರು ಭಾಗವಹಿಸಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬಾಂಬ್ ದಾಳಿಯಿಂದ ಬದುಕುಳಿದು ಬಂದ ಕಾರ್ಗಿಲ್ ಯೋಧ ನವೀನ್ ನಾಗಪ್ಪ ಪಾಲ್ಗೊಂಡು ದೇಶಾಭಿಮಾನ ಉಕ್ಕಿಸಿದರು. ಕಾರ್ಗಿಲ್ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ವೀರ ಯೋಧರನ್ನು ಸ್ಮರಿಸಿ, ಹುತಾತ್ಮರಾದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಜಾಥ ಆಯೋಜಿಸಲಾಗಿತ್ತು. ಮಹಿಳಾ ಬೈಕರ್ಸ್ ಗಳು, ಸಂಚಾರಿ ಪೊಲೀಸರು, ಬಿ.ಎಸ್.ಎಫ್ ಯೋಧರು, 300 ಮಂದಿ ಮಾಜಿ ಯೋಧರು, ನೂರಾರು ವೀರ ನಾರಿಯರು ಬೈಕ್ ಗಳ ಮೂಲಕ ಸೇನಾ ಪಡೆಗೆ ಗೌರವ ಸಲ್ಲಿಸಿದರು.ಮಹಿಳಾ ಬೈಕರ್ ಗಳ ಸ್ವಯಂ ಸೇವಾ ಸಂಘಟನೆ ಶೀ ಫಾರ್ ಸೊಸೈಟಿ ಸಂಘಟನೆಯ ಸಂಸ್ಥಾಪಕರಾದ ಹರ್ಷಿಣಿ ವೆಂಕಟೇಶ್, ವಿದ್ಯಾ ಮಂಜುನಾಥ್,
ಎ7 ಎಂಟರ್ಟೈನ್ಮೆಂಟ್ ನ ಸಂಸ್ಥಾಪಕ ಹರಿ ರಾಜು, ಕ್ಷೇತ್ರ ಚೈನ್ ಆಫ್ ಲಕ್ಸುರಿ ರೆಸಾರ್ಟ್ಸ್ ನ ಸಂಸ್ಥಾಪಕ ಡಾ. ಕೆ.ಜಿ. ಪುರುಷೋತ್ತಮ್ ಮತ್ತಿತರು ಉಪಸ್ಥಿತರಿದ್ದರು.