ಜಿಲ್ಲೆಯಲ್ಲಿ ಮಳೆಯಿಂದ 21.25 ಲಕ್ಷ ನಷ್ಟ

ದಾವಣಗೆರೆ: ಜಿಲ್ಲೆಯಲ್ಲಿ ಅ.07 ರಂದು 5.03 ಮಿ.ಮೀ ನಷ್ಟು ಮಳೆಯಾಗಿದ್ದು, ಒಟ್ಟು ರೂ.21.25 ಲಕ್ಷ ರೂ. ನಷ್ಟದ ಉಂಟಾಗಿದೆ. ಚನ್ನಗಿರಿ 15.20 ಮಿ.ಮೀ., ದಾವಣಗೆರೆ 5.70 ಮಿ.ಮೀ., ಹರಿಹರ 0.25 ಮಿ.ಮೀ., ಜಗಳೂರು 4.04 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 5.03 ಮಿ.ಮೀ. ಮಳೆಯಾಗಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 5 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ.2 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಹಾಗೂ ನರಗನಹಳ್ಳಿ ಗ್ರಾಮದಲ್ಲಿ ಎಂ.ಕೆ ಮಂಜುನಾಥ ಎಂಬುವರು ಹೆಚ್ಚಿನ ಮಳೆಯಿಂದಾಗಿ ಮನೆ ಗೋಡೆ ಬಿದ್ದು ಮೃತಪಟ್ಟಿರುತ್ತಾರೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ.1 ಲಕ್ಷ ಹಾಗೂ 3 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ.1.20 ಲಕ್ಷ ಹಾಗೂ 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ.0.30 ಲಕ್ಷ ಸೇರಿದಂತೆ ಒಟ್ಟು ರೂ.2.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಕಮಲಾಪುರ ಗ್ರಾಮದಲ್ಲಿ 2 ಆಕಳು ಕರುಗಳು, ಮನೆ ಗೋಡೆ ಕುಸಿದು ಮೃತಪಟ್ಟಿರುತ್ತವೆ.

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ.1.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. 1 ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ.0.15 ಲಕ್ಷ ಒಟ್ಟು ರೂ.1.65 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು ರೂ.5.00 ಲಕ್ಷ, 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ.1.30 ಲಕ್ಷ ಮತ್ತು 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ರೂ.1 ಲಕ್ಷ ಹಾಗೂ 6 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ.2.20 ಲಕ್ಷ, ಸೇರಿದಂತೆ ಒಟ್ಟು 9.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top