ಬಳ್ಳಾರಿ: ಕೇಂದ್ರ ಸರ್ಕಾರದ ಪಿಎಂ-ಮುದ್ರಾ ಯೋಜನೆಯ ಅಡಿಯಲ್ಲಿ ಶೇ.30ರಷ್ಟು ಸಬ್ಸಿಡಿಯಲ್ಲಿ 20 ಲಕ್ಷ ರೂಗಳ ಸಾಲವನ್ನು ಕೊಡಿಸುವುದಾಗಿ ನಂಬಿಸಿ, ಬಳ್ಳಾರಿ ತಾಲ್ಲೂಕಿನ ಬಿಸಿಲಹಳ್ಳಿ ಗ್ರಾಮದ ಮಂಜುನಾಥ್ ಎನ್ನುವವರಿಗೆ ಅಪರಿಚಿತ ವ್ಯಕ್ತಿಯು 2.34 ಲಕ್ಷ ರೂಗಳ ಹಣವನ್ನು ಪಡೆದು ವಂಚಿಸಿದ್ದು, ಈ ಬಗ್ಗೆ ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬಿಸಿಲಹಳ್ಳಿ ಗ್ರಾಮದ ಮಂಜುನಾಥ್ ಎನ್ನುವವರಿಗೆ ಫೇಸ್ ಬುಕ್ ಮುಖಾಂತರ ಅನಾಮಧೇಯ ವ್ಯಕ್ತಿಯು ಪರಿಚಯವಾಗಿ `ಪಿಎಂ-ಮುದ್ರಾ’ ಯೋಜನೆಯ ಅಡಿಯಲ್ಲಿ ಶೇಕಡಾ 30 ರಷ್ಟು ಸಬ್ಸಿಡಿಯಲ್ಲಿ, 20 ಲಕ್ಷ ರೂಪಾಯಿಗಳ ಸಾಲ ಕೊಡಿಸುವುದಾಗಿ ಹೇಳಿ, ನಂಬಿಸಿ ಯುಪಿಐ ಮುಖಾಂತರ 2,34,139 ರೂಗಳನ್ನು ಪಡೆದಿದ್ದಾನೆ ಎಂದು ಜಿಲ್ಲಾ ಎಸ್‍ಪಿ ಡಾ|| ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.
ಈ ಬಗ್ಗೆ ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.(ಅಪರಾಧ ಸಂಖ್ಯೆ) 36/2026, ಇನ್‍ಫÀರ್ಮೇಷನ್ ಟೆಕ್ನಾಲಜಿ ಆ್ಯಕ್ಟ್ 2000, ಸೆಕ್ಷನ್ 66(ಡಿ), ಬಿಎನ್‍ಎಸ್-2023 ಸೆಕ್ಷನ್ 318(3) ಪ್ರಕಾರ ಕೇಸ್ ದಾಖಲಾಗಿದ್ದು, ಸೈಬರ್ ಕ್ರೈಮ್ ಠಾಣೆಯ ಪೊಲೀಸರು ಸಮಗ್ರ ತನಿಖೆ ನಡೆಸಿದ್ದಾರೆ.
ಸಾಲ ಕೊಡಿಸುವುದಾಗಿ ನಂಬಿಸಿ, 2.34 ಲಕ್ಷ ರೂ. ಹಣ ಪಡೆದು ವಂಚನೆ



