16 ಕಾಲೇಜ್ ಗಳ ಇಂಟೆರ್ ಕಾಲೇಜ್ ಸ್ಪೋರ್ಟ್ಸ್ ಮೀಟ್-2023 ಬಿಜಿಎಸ್ ಆಟದ ಮೈದಾನದಲ್ಲಿ ಉದ್ಘಾಟನೆ, ಯುವ ಸಮೂಹ ಸಧೃಡ,ಸಶಕ್ತರಾಗಲು ಕ್ರೀಡಾ ಚಟುವಟಿಕೆ ಮುಖ್ಯ-ಡಿ.ಆರ್.ವಿಜಯಸಾರಥಿ.
ಗೋವಿಂದರಾಜನಗರ : ಬಿಜಿಎಸ್ ಆಟದ ಮೈದಾನದಲ್ಲಿ ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜು ವತಿಯಿಂದ ಎರಡು ದಿನಗಳ ಕಾಲ ಅಂತರಕಾಲೇಜು ಕ್ರೀಡಾಕೂಟ-2023 ಆಯೋಜಿಸಿದ್ದರು. ದೀಪ ಬೆಳಗಿಸಿ ಕ್ರೀಡಾ ಕೂಟವನ್ನು ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿರವರು ಮತ್ತು ಪ್ರಾಂಶುಪಾಲರುಗಳಾದ ಪದ್ಮರವರು,ರಚನ, ರಂಗಸ್ವಾಮಿ, ಶೋಭಾ ರವರು ಚಾಲನೆ ನೀಡಿದರು.ವಿಜಯಸಾರಥಿರವರು ಮಾತನಾಡಿ ದೇಶದಲ್ಲಿ ಶೇಕಡ 40%ರಷ್ಟು ಯುವ ಸಮೂಹದ ಜನಸಂಖ್ಯೆ ಅವರನ್ನ ಸರಿಯಾದ ಮಾರ್ಗದರ್ಶನ ಮತ್ತು ಸಮರ್ಥವಾದ ಗುರಿಯತ್ತ ಅವರನ್ನ ಕರೆದುಕೊಂಡು ಹೋದರೆ ಸಶಕ್ತ, ಸಧೃಡ ದೇಶ ಕಟ್ಟಲು ಸಾಧ್ಯ. ಇಂದಿನ ಯುವ ಸಮುದಾಯ ಕೆಟ್ಟ ಹವ್ಯಾಸ, ದುಷ್ಟ ಚಟಗಳಿಗೆ ಮಾರುಹೋಗುತ್ತಿದ್ದಾರೆ ಇದು ಅತಂಕದ ವಿಷಯ.
ಯುವ ಸಮುದಾಯ ಉತ್ತಮ ಮಾರ್ಗದರ್ಶನದಲ್ಲಿ ಸಾಗಲು ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ ಮುಖ್ಯ ಮನೋಸ್ಥೈರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ. ಅದ್ದರಿಂದ ವಾಸವಿ ಶಿಕ್ಷಣ ಸಂಸ್ಥೆ ಕಾಲೇಜು ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾ ಚಟುವಟಿಕೆಯಿಂದ ಮಾನಸಿಕ,ದೃಹಿಕವಾಗಿ ಆರೋಗ್ಯವಂತರಾಗಿ ಇರಬಹುದು ಮತ್ತು ಯುವ ಸಮೂಹ ಸಧೃಡವಾಗಿ ದೇಶ ಅಭಿವೃದ್ದಿ ಸಾಗುತ್ತದೆ. ವಾಸವಿ ಶಿಕ್ಷಣ ಸಂಸ್ಥೆ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಿದ್ದೇವೆ , ನಮ್ಮ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಅಂತರ ಕಾಲೇಜು ಕ್ರೀಡಾಕೂಟದಲ್ಲಿ 16ಕ್ಕೂ ಕಾಲೇಜುಗಳು ಭಾಗವಹಿಸಿದ್ದವು ವಾಲಿಬಾಲ್, ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳು ಹಾಗೂ ಗೆದ್ದ ತಂಡಗಳಿಗೆ ಪ್ರಥಮ ಬಹುಮಾನ 10ಸಾವಿರ ರೂಪಾಯಿ , ಪಾರಿತೋಷಕ ಹಾಗೂ ಎರಡನೇಯ ಬಹುಮಾನ 5ಸಾವಿರ ರೂಪಾಯಿ ಮತ್ತು ಬಾಲಕ, ಬಾಲಕಿಯರು ತಂಡಗಳು ಭಾಗವಹಿಸಿದ್ದರು