ಬೆಂಗಳೂರು : ದೇಶದ 76 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ 1500 ಅಡಿ ಉದ್ದದ ರಂಗೋಲಿ ಮೂಲಕ ರಾಷ್ಟ್ರಧ್ವಜ ರಚಿಸಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಬೆಂಗಳೂರು : ದೇಶದ 76 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ 1500 ಅಡಿ ಉದ್ದದ ರಂಗೋಲಿ ಮೂಲಕ ರಾಷ್ಟ್ರಧ್ವಜ ರಚಿಸಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ವಾಸವಿ ಜ್ಞಾನಪೀಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಅರ್. ವಿಜಯಸಾರಥಿ ಮಾತನಾಡಿ, ಇಂದು ನಮ್ಮೆಲ್ಲರಿಗೂ ಸಂಭ್ರಮ, ಸಡಗರದ ದಿನ. ನಾವು ಕೇವಲ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿಲ್ಲ, ಬದಲಿಗೆ ಸಂಭ್ರಮಿಸುತ್ತಿದ್ದೇವೆ. ಸ್ವಾತಂತ್ರ್ಯದ ಮಹತ್ವ, ತ್ರಿವರ್ಣ ಧ್ವಜದ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ರಂಗೋಲಿ ಮೂಲಕ ಬೃಹತ್ ಧ್ವಜ ರಚಿಸಲಾಗಿದೆ. ಸರ್ಕಾರ ಹರ್ ಘರ್ ತಿರಂಗಾ ಹಾರಿಸುವಂತೆ ಕರೆ ನೀಡಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಧ್ವಜ ಅನಾವರಣಗೊಳಿಸಲಾಗಿದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪದ್ಮ, ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ವಿ. ರಂಗಸ್ವಾಮಿ, ಎಸ್. ರಚನಾ, ಡಿಪ್ಲಮೋ ಕಾಲೇಜಿನ ಪ್ರಾಂಶುಪಾಲರಾದ ಸೌಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ;
76 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ
ವಿದ್ಯಾರ್ಥಿಗಳು 1500 ಅಡಿ ಉದ್ದದ ರಂಗೋಲಿ ರಚಿಸಿದರು. ವಾಸವಿ ಜ್ಞಾನಪೀಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ
ಡಿ.ಅರ್. ವಿಜಯಸಾರಥಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪದ್ಮ, ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ
ಡಾ.ಬಿ.ವಿ. ರಂಗಸ್ವಾಮಿ, ಎಸ್. ರಚನಾ, ಡಿಪ್ಲಮೋ ಕಾಲೇಜಿನ ಪ್ರಾಂಶುಪಾಲರಾದ ಸೌಭಾಗ್ಯ ಮತ್ತಿತರರು
ಉಪಸ್ಥಿತರಿದ್ದರು.