ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು

ಬೆಂಗಳೂರು : ದಕ್ಷಿಣ ವಲಯದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ  ದೇಶಾದ್ಯಂತ ಒಟ್ಟಾರೆ 19,030 ಕೋಟಿ ರೂ ವಹಿವಾಟಿನಲ್ಲಿ ಕರ್ನಾಟಕದ ಪಾಲು 5.9% ರಷ್ಟು ದೇಶದಲ್ಲಿ ನೇರ ಮಾರಾಟ ವಲಯದಲ್ಲಿ 78 ಸಾವಿರ ಮಂದಿ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಈ ಪೈಕಿ ಕರ್ನಾಟಕದಲ್ಲಿ 34 ಸಾವಿರ ಮಹಿಳೆಯತು 1128 ಕೋಟಿ ರೂಪಾಯಿ ವಹಿವಾಟು ನಡೆಸಿ, 9.09% ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದಾರೆ ಎಂದು ಭಾರತೀಯ ನೇರ ಮಾರಾಟ ಒಕ್ಕೂಟ [ಐಡಿಎಸ್ಎ] ತಿಳಿಸಿದೆ.  ದಕ್ಷಿಣ ಭಾರತದಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದಕ್ಕೂ ಹಿಂದಿನ ವರ್ಷ 1034 ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಕೋವಿಡ್ 19 ಎರಡನೇ ಅಲೆಯಿಂದ ವ್ಯಾಪಾರ ವಹಿವಾಟು ಭಾಗಶಃ ಪ್ರಭಾವಕ್ಕೊಳಗಾಗಿದ್ದರೂ ನೇರ ಮಾರಾಟ ಉದ್ಯಮ ಪ್ರಬಲವಾಗಿ ಹೊರ ಹೊಮ್ಮಿದೆ. ಈ ಅವಧಿಯಲ್ಲಿ ಬೊಕ್ಕಸಕ್ಕೆ ಸುಮಾರು 170 ಕೋಟಿ ರೂಪಾಯಿ ಜಿ.ಎಸ್.ಟಿ ಮೂಲಕ ಕೊಡುಗೆ ನೀಡಿದೆ. ಇದೇ ಸಮಯದಲ್ಲಿ ದೇಶಾದ್ಯಂತ 19,030 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಕರ್ನಾಟಕದ ಪಾಲು 5.90% ರಷ್ಟಿದೆ.    ನಗರದಲ್ಲಿಂದು ಒಕ್ಕೂಟ ನಡೆಸಿರುವ 2021–22ರ ವಾರ್ಷಿಕ ಸಮಾವೇಶದಲ್ಲಿ  ಸಮೀಕ್ಷಾ ವರದಿಯನ್ನು ಭಾರತೀಯ ನೇರ ಮಾರಾಟ ಒಕ್ಕೂಟ [ಐಡಿಎಸ್ಎ]ದ ಅಧ್ಯಕ್ಷ ರಜತ್ ಬ್ಯಾನರ್ಜಿ ಬಿಡುಗಡೆ ಮಾಡಿದರು. ಮಾಜಿ ಪೊಲೀಸ್ ಆಯುಕ್ತ ಶಂಕರ್ ಮಹದೇವ್ ಬಿದರಿ, ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕಿ  ಪ್ರೀತಿ ಚಂದ್ರಶೇಖರ್ ಅವರು ಮಹಿಳಾ ಸಾಧಕಿಯರನ್ನು ಸನ್ಮಾನಿಸಿದರು. 

ನಂತರ ಮಾತನಾಡಿದ ಐಡಿಎಸ್ಎ ಅಧ್ಯಕ್ಷ ರಜತ್ ಬ್ಯಾನರ್ಜಿ “ನೇರಮಾರಾಟ ವಲಯದಲ್ಲಿ ಕರ್ನಾಟಕ ಪ್ರಮುಖ ಮಾರುಕಟ್ಟೆಯಾಗಿದ್ದು, ಕೋವಿಡ್ ಸಾಂಕ್ರಾಮಿಕದ ನಂತರದ ಮೊದಲ ತ್ರೈಮಾಸಿಕದಲ್ಲಿ ಶೇ 9 ಕ್ಕೂ ಹಚ್ಚು ಪ್ರಗತಿ ಸಾಧಿಸಿತ್ತು. ನೇರಮಾರಾಟ ವಲಯ ದೇಶದ 84 ಲಕ್ಷ ಜನರಿಗೆ ಸುಸ್ಥಿರ ಸ್ವಯಂ ಉದ್ಯೋಗದ ಜೊತೆಗೆ ಸೂಕ್ಷ್ಮ ವಲಯದಲ್ಲಿ ಉದ್ಯಮ ಶೀಲತೆ ಉತ್ತೇಜಿಸುವುದನ್ನು ಪ್ರತಿಬಿಂಬಿಸುತ್ತದೆ. ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ನೇರ ಮಾರಾಟ ವಲಯ ಸುಮಾರು 13 ರಷ್ಟು ಪ್ರಗತಿ ಸಾಧಿಸಿದೆ. ಐಡಿಎಸ್ಎ ನ 19 ಸದಸ್ಯ ಕಂಪೆನಿಗಳು ಗ್ರಾಹಕರ ಹಿತಾಸಕ್ತಿ ಮತ್ತು ರಾಜ್ಯದ 78 ಸಾವಿರ ನೇರ ಮಾರಾಟಗಾರರ ಹಿತಾಸಕ್ತಿಗಳನ್ನು ಯಶಸ್ವಿಯಾಗಿ ರಕ್ಷಿಸುತ್ತಿದೆ” ಎಂದರು.  ಈ ವರ್ಷ ಐಡಿಎಸ್ಎ ಮತ್ತು ಇತರೆ ಪ್ರಧಾನ ಸಂಸ್ಥೆಗಳ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಫಲವನ್ನು ನಾವೀಗ ಕಾಣುತ್ತಿದ್ದೇವೆ. ಗ್ರಾಹಕ ವ್ಯವಹಾರಗಳ ಸಚಿವಾಲಯ  ಈ ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾಗಿದ್ದು, 2021 ರಲ್ಲಿ ಗ್ರಾಹಕ ರಕ್ಷಣೆ [ನೇರಮಾರಾಟ] ನಿಯಮಗಳನ್ನು ರಚಿಸಲಾಗಿದೆ. ಇದು ದೇಶದಲ್ಲಿ ನೇರ ಮಾರಾಟ ಘಟಕಗಳ ಕಾರ್ಯಾಚರಣೆಗಳ ಮೇಲೆ ನಿಯಂತ್ರಣ ತರುತ್ತದೆ ಎಂದು ರಜತ್ ಬ್ಯಾನರ್ಜಿ ಹೇಳಿದರು. 

ಶಂಕರ ಬಿದರಿ ಮಾತನಾಡಿ, ಸ್ವಯಂ ಉದ್ಯೋಗದ ಮೂಲಕ ನಿರುದ್ಯೋಗ ನಿವಾರಣೆ ಮಾಡಬಹುದಾಗಿದ್ದು, ಇದರಿಂದ ಗ್ರಾಹಕರಿಗೆ ಸುಲಭದರದಲ್ಲಿ ಉತ್ಪನ್ನಗಳು ದೊರೆಯಲಿದ್ಉದ, ಗ್ರಾಹಕ ಸಂತೃಪ್ತಿಯಾಗುತ್ತಾನೆ. ಪ್ರಪಂಚದ ಎಲ್ಲ ದೇಶದಲ್ಲಿ ನೇರ ಮಾರಾಟ ಉದ್ಯಮವಿದ್ದು, ಗ್ರಾಹಕನಿಗೆ ಇಷ್ಟವಾದ ಮತ್ತು ಗುಣಮಟ್ಟದ ವಸ್ತುಗಳು ನೇರ ಮಾರಾಟದಲ್ಲಿ ದೊರೆಯುತ್ತದೆ. 80ರಷ್ಟು ಅಂದರೆ 50ಲಕ್ಷ ಮಹಿಳೆಯರು ಈ ವಲಯದಲ್ಲಿ ಕಾರ್ಯನಿರ್ವಹಿ ಸ್ವಾವಲಂಬಿಯಾಗಿದ್ದಾರೆ ಎಂದು ಹೇಳಿದರು.

ಐಡಿಎಸ್ಎ ಉಪಾಧ್ಯಕ್ಷ ವಿವೇಕ್ ಕಟೋಚಿ, ಕಾರ್ಯಾದರ್ಶಿ ಅಪ್ರಜಿತ ಸರ್ಕಾರ್ ಪ್ರಧಾನ ವ್ಯವಸ್ಥಾಪಕ ಚೇತನ್  ಭಾರದ್ವಾಜ್ , ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top