ದಾವಣಗೆರೆ: ನಗರದ ಎಸ್ ಎಸ್ ಲೇಔಟ್ ನ ಬಿ ಬ್ಲಾಕ್ ನ ರಿಂಗ್ ರಸ್ತೆಯ ಶಾರದಮ್ಮ ದೇವಸ್ಥಾನ ಬಳಿಯ ಫರ್ನಿಚರ್ ಅಂಗಡಿ ಬೀಗ ಮುರಿದು ಕೌಂಟರ್ ನಲ್ಲಿದ್ದ 1.25 ಲಕ್ಷ ನಗದು ಹಣದ ಜತೆ ಅಂಡಿಯಲ್ಲಿದ್ದ ಸಿಸಿ ಕ್ಯಾಮೆರಾ, ಡಿವಿಆರ್ ಕಳ್ಳತನ ಮಾಡಿದ್ದಾರೆ. ನಿಜಲಿಂಗಪ್ಪ ಬಡಾವಣೆಯ ಹರ್ಷ ಎಂಬುವರಿಗೆ ಸೆರಿದ ಅಂಗಡಿಯಲ್ಲಿ ಕಳ್ಳತನವಾಗಿದೆ. ಎಂದಿನಂತೆ ದಿನದ ವ್ಯಾಪಾರ ಮುಗಿಸಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ರಾತ್ರಿ ವೇಳೆ ಅಂಗಡಿ ಬೀಗ ಮುರಿದು 1.25 ಲಕ್ಷ ಕಳ್ಳತನ ಮಾಡಿದ್ದಲ್ಲದೆ, ಕಳ್ಳತನ ಗುರುತು ಸಿಗಬಾರದು ಎಂದು ಸಿಸಿ ಕ್ಯಾಮೆರಾ ಹಾಗೂ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.