ಮೂಲಭೂತ ಸೌಲಭ್ಯಗಳ ವಂಚಿತ ಹೆರಕಲ್‌ಗ್ರಾಮ

ಸಿರುಗುಪ್ಪ: ತಾಲೂಕಿನ ಹೆರಕಲ್‌ ಗ್ರಾಮದಲ್ಲಿರುವ ಬಸ್ ನಿಲ್ದಾಣವು ಶಿಥಿಲಾವ್ಯವಸ್ಥೆಯಲ್ಲಿದ್ದು ಅಪಾಯಕ್ಕೆ ಕಾದು ಕುಳಿತಿದೆ. ಸೂಕ್ತ ಚರಂಡಿ ವ್ಯವಸ್ಥೆ, ಸಿ.ಸಿ ಅಥವಾ ಡಾಂಬರೀಕರಣ ರಸ್ತೆ, ಕುಡಿಯುವ ಶುದ್ದ ನೀರಿನ ಸಮಸ್ಯೆಗಳಂತಹ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದೆ.

ಗ್ರಾಮದಲ್ಲಿ ಹದಗೆಟ್ಟ ಮುಖ್ಯರಸ್ತೆ, ಹತ್ತಾರು ವರ್ಷಗಳೇ ಕಳೆದರೂ ಸಿ.ಸಿ ಕಾಣದ ಬೀದಿಗಳು, ಇನ್ನೊಂದೆಡೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ, ಸಿಸಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವು ದರಿಂದ ಸಂಚಾರಕ್ಕೆ ಅಸ್ತವ್ಯಸ್ತವಾದರೇ ಕೆಲವಡೆ ಚರಂಡಿಯಲ್ಲಿ ಹೂಳು ತೆಗೆಯದೇ ಗಬ್ಬು ನಾರುತ್ತಿದೆ.

ನೆರೆ  ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮನೆಗಳೊಂದಿಗೆ ನವ ಗ್ರಾಮವನ್ನು ನಿರ್ಮಿಸಿಕೊಟ್ಟು ಹಲವು ವರ್ಷಗಳೇ ಕಳೆದರೂ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ಬಂದರೆ ಸಾಕು ಆವರಣವೆಲ್ಲಾ ಕೆರೆಯಂತಾಗುತ್ತಿದ್ದು ನಿಂತ ನೀರಿನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಗ್ರಾಮದ ಬಳಕೆಗಾಗಿ ನಿರ್ಮಿಸಿರುವ ಶುದ್ದ ನೀರಿನ ಘಟಕ ಕೆಟ್ಟು ಹೋಗಿ ತಿಂಗಳುಗಳೇ ಕಳೆದರೂ ದುರಸ್ತಿಯಾಗದಿರುವುದರಿಂದ ಗ್ರಾಮಸ್ಥರು ಕುಡಿಯಲು ಅನ್ಯ ಗ್ರಾಮಗಳಿಂದ ನೀರು ತರಬೇಕಾದ ಅನಿವಾರ್ಯವಾಗಿದೆ.

ಜಲಜೀವನ್ ಮಿಷನ್‌ ಯೋಜನೆಯಡಿ ಮನೆ ಮನೆಗೆ ಶುದ್ದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲೋತ್ಸವ ಮುಖ್ಯ ಪೈಪ್ ಅಳವಡಿಕೆಗಾಗಿ ತೋಡಲಾದ ನೆಲವನ್ನು ಕಾಂಕ್ರೀಟ್ ಹಾಕಿ ದುರಸ್ತಿಗೊಳಿಸಿಲ್ಲ. ನಳಗಳಿಗೆ ಪೈಪ್ ಸಂಪರ್ಕವೂ ಕಲ್ಪಿಸದೇ ಅರಬರೆ ಕಾಮಗಾರಿಯಾಗಿದೆಂಬುದು ಗ್ರಾಮಸ್ಥರ ಆರೋಪವಾಗಿದೆ.

ಇನ್ನು ಮುಂದಾದರೂ ಸಂಬಂಧಿಸಿದ ಮೇಲಾಧಿಕಾರಿಗಳು ಈ ಬಗ್ಗೆ ಗಮನವಹಿಸಿ ಗ್ರಾಮಕ್ಕೆ ಶುದ್ದಕುಡಿಯುವ ನೀರು, ಸುಸಜ್ಜಿತ ಸಿ.ಸಿ ರಸ್ತೆ, ಚರಂಡಿ ವ್ಯವಸ್ಥೆ, ಮಕ್ಕಳಿಗೆ ಉತ್ತಮ ಶಾಲಾ ಮೈದಾನ, ಶಿಥಿಲಾವ್ಯವಸ್ಥೆಯಲ್ಲಿರುವ ಬಸ್ ನಿಲ್ದಾಣದ ದುರಸ್ತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಒದಗಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ

Leave a Comment

Your email address will not be published. Required fields are marked *

Translate »
Scroll to Top