ಪ್ರಮಾಣ ವಚನ ಸ್ವೀಕರಿಸಲಿದ್ದಾರೆ 24 ಮಂದಿ ಸಚಿವರು…..!

ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ನಿರ್ಣಾಯಕ ಘಟ್ಟ ತಲುಪಿದ್ದು, ಶನಿವಾರ ಬೆಳಿಗ್ಗೆ 11.45 ಕ್ಕೆ 24 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ 34 ಸದಸ್ಯರು ಪೂರ್ಣ ಪ್ರಮಾಣದ ಸಂಪುಟ ಅಸ್ಥಿತ್ವಕ್ಕೆ ಬರಲಿದೆ.

ರಾಜಭವನಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಸಂದೇಶ ರವಾನಿಸಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗಾಜಿನ ಮನೆಯಲ್ಲಿ ವೇದಿಕೆ ಸಜ್ಜುಗೊಂಡಿದೆ. ವರಿಷ್ಠರ ಸಮ್ಮತಿ ಪಡೆದು ಅಂತಿಮ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಆಗಮಿಸಿದರು.

Chief Minister Siddaramaiah called on Congress party leaders Sonia Gandhi and Rahul Gandhi in New Delhi on Friday. -KPN ### Siddaramaiah called on Sonia Gandhi

ಸಂಪುಟಕ್ಕೆ ಸೇರ್ಪಡೆಯಾಗುವವರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಧಿನಾಯಕಿ ಸೋನಿಯಾ ಗಾಂಧಿ, ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರೊಂದಿಗೆ ಸುದೀರ್ಘ ಸಮೋಲಚನೆ ನಡೆಸಿ ಪಟ್ಟಿಗೆ ಒಪ್ಪಿಗೆ ಪಡೆಯಲಾಗಿದೆ. ಇಷ್ಟಾದರೂ ಕೆಲವರ ಸೇರ್ಪಡೆ ಮತ್ತು ಕೈಬಿಡುವ ಪ್ರಕ್ರಿಯೆ ಮುಂದುವರೆದಿದೆ. ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಡಾ. ಎಂ.ಸಿ. ಸುಧಾಕರ್ ಮತ್ತಿತರರು ಕೊನೆಗಳಿಗೆಯಲ್ಲಿ ತಮ್ಮ ಕಸರತ್ತು ಮುಂದುವರೆಸಿದ್ದಾರೆ. ಸ್ಪೀಕರ್ ಸ್ಥಾನ ಬೇಡ ಎಂದ ಆರ್.ವಿ.ದೇಶಪಾಂಡೆ, ಟಿ.ಬಿ. ಜಯಚಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ದೆಹಲಿಯಲ್ಲಿ ಹಿರಿ, ಕಿರಿಯ ಶಾಸಕರು ಮಂತ್ರಿಗಿರಿಗಾಗಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರದಲ್ಲಿ ತೊಡಗಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಸಚಿವ ಸಂಪುಟ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಷ್ಠರ ಜೊತೆ ಚರ್ಚೆ ನಡೆಸಿದರು. ಆದರೆ ಮಂತ್ರಿಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆದರೆ ಶನಿವಾರ ಬೆಳಿಗ್ಗೆ ಮಂತ್ರಿಮಂಡಲ ವಿಸ್ತರಣೆಯಾಗಲಿದೆ ಎಂದು ಪ್ರಕಟಿಸಿದರು.

ಶನಿವಾರ ೨೪ ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಸಚಿವರ ಪಟ್ಟಿ ಅಂತಿಮಗೊಂಡಿದ್ದರೂ ಖಾತೆ ಹಂಚಿಕೆಯ ಹಗ್ಗಜಗ್ಗಾಟ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಪ್ರಬಲ ಖಾತೆಗಳನ್ನು ಕೊಡಿಸಲು ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಕಳೆದ ೨ ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರಂತರ ಸಭೆಗಳನ್ನು ನಡೆಸಿದ ಬಳಿಕ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದೆ.

ಪೂರ್ಣ ಪ್ರಮಾಣದಲ್ಲಿ ಸಂಪುಟ ರಚಿಸಲು ವರಿಷ್ಠರು ಒಪ್ಪಿಗೆ ನೀಡಿದ್ದು, ಅದರಂತೆ ನಾಳೆ ೨೪ ಸಚಿವರ ಪ್ರಮಾಣವಚನ ನಡೆಯಲಿದೆ.ನೂತನ ಸಚಿವರು ನಾಳೆ ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಬೆಳಿಗ್ಗೆ ೧೧.೪೫ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಲ್ಹೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸುವರು.

ಈ ಮೊದಲು 20 ಸ್ಥಾನಗಳಷ್ಟೇ ಭರ್ತಿ ಮಾಡಿ, 4 ಸ್ಥಾನಗಳನ್ನು ಖಾಲಿಬಿಡುವ ತೀರ್ಮಾನ ಮಾಡಲಾಗಿತ್ತಾದರೂ ಸಚಿವ ಪಟ್ಟಕ್ಕೆ ಪೈಪೋಟಿ ಹೆಚ್ಚಿದ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲ 24 ಸ್ಥಾನಗಳನ್ನು ಭರ್ತಿ ಮಾಡುವ ತೀರ್ಮಾನಕ್ಕೆ ಹೈಕಮಾಂಡ್ ಅಸ್ತು ಎಂದಿದೆ.

ಪಟ್ಟಿ ಅಂತಿಮ, ಖಾತೆಗೆ ಜಟಾಪಟಿ

ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದರೂ ಖಾತೆ ಹಂಚಿಕೆಯ ಸರ್ಕಸ್ ಮುಂದುವರೆದಿದ್ದು, ಪ್ರಬಲ ಖಾತೆಗಳಿಗಾಗಿ ಹಲವು ಹಿರಿಯ ಸಚಿವರು ಪಟ್ಟು ಹಿಡಿದಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಒಳ್ಳೆಯ ಖಾತೆಗಳನ್ನು ಕೊಡಿಸಲು ಲಾಬಿ ನಡೆಸಿದ್ದಾರೆ. ಹಾಗಾಗಿ, ಖಾತೆ ಹಂಚಿಕೆ ಕಗ್ಗಂಟಾಗಿದೆ.

ಹಿರಿಯರಿಗೆ ಸ್ಥಾನ ಇಲ್ಲ

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲ ಹಿರಿಯರಿಗೆ ಸಚಿವ ಸ್ಥಾನ ಕೈತಪ್ಪುವುದು ನಿಶ್ಚಿತವಾಗಿದ್ದು, ಹಿರಿಯ ಶಾಸಕರಾದ ಆರ್.ವಿ ದೇಶ್‌ಪಾಂಡೆ, ಅಪ್ಪಾಜಿ ನಾಡಗೌಡ, ಟಿ.ಬಿ. ಜಯಚಂದ್ರ, ಬಿ.ಕೆ. ಹರಿಪ್ರಸಾದ್ ಇವರುಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಆದರೂ ಇವರುಗಳು ಸಚಿವ ಪಟ್ಟಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಸಂಪುಟದಲ್ಲಿ ಅವಕಾಶ ಸಿಗದ ಹಿರಿಯ ಶಾಸಕರಿಗೆ ಮುಂದೆ ಅವಕಾಶ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ.

ಸಂಭಾವ್ಯ ಸಚಿವರ ಪಟ್ಟಿ

ಈಶ್ವರ ಖಂಡ್ರೆ

ಶಿವಾನಂದ ಪಾಟೀಲ್

ಎಸ್.ಎಸ್ ಮಲ್ಲಿಕಾರ್ಜುನ

ಡಾ. ಶರಣ್ ಪ್ರಕಾಶ್ ಪಾಟೀಲ್

ಲಕ್ಷ್ಮಿ ಹೆಬ್ಬಾಳ್ಕರ್

ಡಾ. ಹೆಚ್.ಸಿ ಮಹದೇವಪ್ಪ

ಆರ್.ಬಿ ತಿಮ್ಮಾಪುರ

ರುದ್ರಪ್ಪ ಲಮಾಣಿ

ಹೆಚ್.ಕೆ. ಪಾಟೀಲ್

ಪಿರಿಯಾಪಟ್ಟಣ ವೆಂಕಟೇಶ್

ಕೃಷ್ಣ ಭೈರೇಗೌಡ

ದಿನೇಶ್ ಗುಂಡೂರಾವ್

ಚೆಲುವರಾಯ ಸ್ವಾಮಿ

ಭೈರತಿ ಸುರೇಶ್

ಸಂತೋಷ್ ಲಾಡ್

ರಹೀಂ ಖಾನ್

ಪುಟ್ಟರಂಗಶೆಟ್ಟಿ

ಕೆ.ಎನ್ ರಾಜಣ್ಣ (ಮಧುಗಿರಿ)

ಮಧುಬಂಗಾರಪ್ಪ

ಮಾಂಕಾಳ ಸುಬ್ಬುವೈದ್ಯ

ಶಿವರಾಜ್ ತಂಗಡಗಿ

ಬಿ. ನಾಗೇಂದ್ರ

ಬೋಸ್‌ರಾಜ್.

Leave a Comment

Your email address will not be published. Required fields are marked *

Translate »
Scroll to Top