ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ನಾಗೇಂದ್ರ

ಚಾಮರಾಜನಗರ : ಸಚಿವರಾದ ಬಿ ನಾಗೇಂದ್ರ ಅವರು ಚಾಮರಾಜನಗರ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿತಿಗತಿಗಳನ್ನು ವಿಚಾರಿಸಿ ಅಪಘಾತದ ವಿವರ ಪಡೆದರು.

ಇದೇ ವೇಳೆ ಮಾತನಾಡಿದ ಅವರು, ಪ್ರವಾಸಕ್ಕೆಂದು ಬಂದವರು ಮಸಣ ಸೇರಿದ್ದು ನೋವಿನ ಸಂಗತಿಯಾಗಿದೆ. ಅವರ ಕುಟುಂಬಸ್ಥರಿಗೆ ನೋವಿನ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರಲ್ಲದೆ, ಶೀಘ್ರದಲ್ಲಿ ಸ್ಪಂದಿಸಿ, ಮೃತರ ಕುಟುಂಬಗಳಿಗೆ 2 ಲಕ್ಷ ಪರಿಹಾರ ನೀಡಿದ್ದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top